ದೇವರ ಮನೆ ನಿರ್ಮಾಣ, ಗುಂಪುಗಳ ಜತೆ ವಾಗ್ವಾದ

Published on

ಬಳ್ಳಾರಿ ; ತಾಲೂಕಿನ ಗೋಸಬಾಳು ಗ್ರಾಮದ ಶ್ರೀಮರಿಲಿಂಗೇಶ್ವರ (ಮರಿಗುದುರೇಶ್ವರ) ದೇವರ ಮನೆ ನಿರ್ಮಾಣ ಹಾಗೂ ಕುದುರೆ ಮೂರ್ತಿ ದೇವರನ್ನು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಗ್ರಾಮದ ಮೂರು ಗುಂಪುಗಳ ನಡುವೆ ವಾದ ವಿವಾದ ನಡೆಯಿತು.

ಗ್ರಾಮದ ಶ್ರೀಮರಿಲಿಂಗೇಶ್ವರ (ಮರಿಗುದುರೇಶ್ವರ), ದೇವರ ಮನೆಯ ಮೇಟಿಗಳಾದ ಶಾನಭೋಗರ ಮೇಟಿ, ಪೂಜಾರಿ ಮೇಟಿ, ಮೇಟೆಗೌಡ ಮೇಟಿ, ದೇವರ ಮನೆ ನಿರ್ಮಾಣಕ್ಕಾಗಿ ಸರ್ವಾನುಮತದಿಂದ ಮರಿಗುದುರೇಶ್ವರ ದೇವರ ಮೂರ್ತಿ ಹಾಗೂ ಕುದುರೆ ದೇವರ ಮೂರ್ತಿಯನ್ನು ಬೀರಲಿಂಗೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದರು. ನಂತರ ಸದರಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೇಟಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಇದರಿಂದ ಸದರಿ ದೇವರನ್ನು ಗುರುವಿನ ಸಿದ್ದಲಿಂಗಪ್ಪನ ಮನೆಯ ಎದುರಿನ ದೇವಸ್ಥಾನಕ್ಕೆ ಮೂಲ ಕುದುರೆ ದೇವರ ಮೂರ್ತಿಯನ್ನು ಬೀರಲಿಂಗಗೇಶ್ವರ ದೇವಸ್ಥಾನದಿಂದ ವಾಪಾಸ್ ತಂದು ಇಡಲು ಹಾಗೂ ಯಥಾಸ್ಥಿತಿ ಕಾಪಾಡಲು ತಹಶೀಲ್ದಾರ್ ಗೌಸಿಯಾ ಬೇಗಂ ಸೂಚಿಸಿದ್ದರು. ಅದರಂತೆ ಕಂದಾಯ ಇಲಾಖೆ ಹಾಗೂ ಪೊಲೀಸ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮೂರು ಗುಂಪುಗಳ ನಡುವೆ ಕೈ ಕೈ ಮಿಲಾಯಿಸಿಕೊಂಡರು. ಇದೇ ವೇಳೆ ಯುವಕನೊಬ್ಬ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net