ಭಾರತದ ಸಂವಿಧಾನವು ಶ್ರೇಷ್ಠ

Published on

ಬಳ್ಳಾರಿ : ವಿವಿಧತೆ ಮತ್ತು ಸಾಂಸ್ಕೃತಿಕ ವೈಭವ ಹೊಂದಿರುವ ದೇಶದಲ್ಲಿ ಎಲ್ಲವೂ ಸಂವಿಧಾನದ ಮೇಲೆ ಅವಲಂಬಿತವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ ವಿಭಾಗದ ಪ್ರೊ. ಡಾ.ಬಿ.ಸರೋಜ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿಯ ಸಭಾಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಮತ್ತು ಸಂವಿಧಾನ ಓದು ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಸೇವೆಯಲ್ಲಿ ಶಿಸ್ತು, ದೇಶ ಮೊದಲು ಎಂದು ಗೌರವ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಸಂವಿಧಾನದ ಇತಿಹಾಸವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾರ್ವಭೌಮತ್ವ ಎಂಬುದು ನಮ್ಮ ದೇಶದ ಆಸ್ತಿಯಾಗಿದ್ದು, ಸಮಾಜವಾದ, ಜಾತ್ಯಾತೀತತೆ, ಪ್ರಜಾಸತ್ತತೆ, ಅಭಿವ್ಯಕ್ತಿ ಸ್ವಾತಂತ್ರೃ, ಏಕತೆ, ಸಮಗ್ರತೆ ಎಂಬುವವು ಸಂವಿಧಾನದ ಮೂಲ ಧ್ಯೇಯವಾಗಿವೆ ಎಂದರು. ಸಂವಿಧಾನ ವಿರೋಧಿಸುವ ಮೂಢರಿಗೆ ಇವುಗಳ ಕುರಿತು ಜ್ಞಾನ ನೀಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net