ನನ್ನ ವಿರುದ್ಧ ನಡೆದಿದೆ ಷಡ್ಯಂತ್ರ

17092022 t gangadhar gouda
Published on

ಬಳ್ಳಾರಿ: ರೋಗಿಗಳ ಸಾವಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾರೋ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಟಿ.ಗಂಗಾಧರಗೌಡ ಹೇಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿ, ನನ್ನ ಹೆಸರು ಕೆಡಿಸಲು ಏನೇನೋ ಮಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ದಿನ ಕೆಲವರು ಪೋನ್‌ನಲ್ಲಿ ಮಾತನಾಡಿದ್ದಾರೆ. ಆ ಆಡಿಯೋ ಸಂಗ್ರಹಿಸುತ್ತಿರುವೆ. ನನ್ನ ಹೆಸರು ಕೆಡಿಸಲು ಅಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ರೋಗಿಗಳು ಸತ್ತ ನಂತರ ಶವವಿಟ್ಟು ಪ್ರತಿಭಟನೆ ಮಾಡೋ ಪ್ಲ್ಯಾನ್ ಮಾಡಿದ್ದರು. ಇದರ ಹಿಂದಿರುವವರ ವಿರುದ್ದ ದೂರು ನೀಡಲು ನಿರ್ಧರಿಸಿರುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net