ಬಳ್ಳಾರಿ : ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ಬಳಿ 560 ಗ್ರಾಂ ಬಂಗಾರ, ಒಂದು ಹೋಂಡಾ ಆಕ್ಟಿವ್ ಬೈಕ್, ಕಟ್ಟಡ ಸೇರಿ ಒಟ್ಟು ಚರಾಸ್ತಿ ಹಾಗೂ ಸ್ಥಿರಾಸ್ತಿ 1.07 ಕೋಟಿ ರೂ. ಯಿದೆ. ಪತಿ ಈ. ತುಕಾರಾಮ್ ಹಾಗೂ ಇತರರಿಂದ 1.02 ಕೋಟಿ ರೂ. ಸಾಲವಿದೆ ಎಂದು ಆಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸಂಸದ, ಪತಿ ತುಕಾರಾಮ್ ಬಳಿ 350 ಗ್ರಾಂ ಚಿನ್ನಾಭರಣ, ಕಾರು ಹಾಗೂ ನಿವೇಶನ ಸೇರಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ 1.09 ಕೋಟಿ ರೂ. ಆಸ್ತಿಯಿದೆ. ಬ್ಯಾಂಕ್ ಹಾಗೂ ಇತರೆ ವ್ಯಕ್ತಿಗಳಿಂದ 30 ಲಕ್ಷ ರೂ. ಸಾಲ ಪಡೆಯಲಾಗಿದೆ ಎಂದು ನಮೂದಿಸಿದೆ. ಅನ್ನಪೂರ್ಣ ಮಕ್ಕಳಾದ ವಂದನಾ, ಚೈತನ್ಯ, ರಘನಂದನಾ ಕ್ರಮವಾಗಿ 120 ಗ್ರಾಂ, 40 ಗ್ರಾಂ ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ 9.72 ಲಕ್ಷ ರೂ. ಖಾತೆಯಲ್ಲಿ ಜಮೆಯಾಗಿದೆ ಎಂದು ತಿಳಿಸಲಾಗಿದೆ. ಅನ್ನಪೂರ್ಣ, ಪತಿ ತುಕಾರಾಮ್ ಹಾಗೂ ಮಕ್ಕಳ ಹೆಸರಿನಲ್ಲಿ ಯಾವುದೆ ಕೃಷಿ ಹಾಗೂ ಕೃಷಿಯೇತರ ಭೂಮಿ ಇಲ್ಲ.