ಉನ್ನತ ತನಿಖೆ ನಡೆಸಿ, ತಪ್ಪಿಸ್ಥರ ಬಂಧಿಸಿ

Published on

ಬಳ್ಳಾರಿ : ಸುಪ್ರೀಂ ಕೋರ್ಟ್‌ನ ಮುಖ್ಯನಿವೃತ್ತ ನ್ಯಾಯಮೂರ್ತಿ(ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಆರೋಪಿಯನ್ನು ಕೂಡಲೇ ಬಂಧಿಸಿಬೇಕು ಎಂಬುದಾಗಿ ಆಗ್ರಹಿಸಿ, ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ.ಜಿ.) ಸಾಗರ ಬಣವು ಇಲ್ಲಿನ ಗವಿಯಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಈ ಕೃತ್ಯ ಎಸಗಿದ ಅಪರಾಧಿಗೆ ಕಠಿಣ ಶಿಕ್ಷೆಗೆ ಗುರುಪಡಿಸವುದರೊಟ್ಟಿಗೆ ಉನ್ನತ ತನಿಖೆ ಕೈಗೊಂಡು ಘಟನೆ ಹಿಂದಿರುವ ಸಂವಿಧಾನ ದ್ರೋಹಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಇತ್ತೀಚಿಗೆ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಭಾಗವಹಿಸಲು ಸಿಜೆಐ ಬಿ.ಆರ್. ಗವಾಯಿ ಅವರು ನಿರಾಕರಿಸಿದ್ದರು. ಅಲ್ಲದೆ, ಖಜರಾಹಿ ದೇವಾಲಯದ ಪ್ರಕರಣದ ಕುರಿತು ಪ್ರಚಾರಕ್ಕಾಗಿ ಕೋರ್ಟ್‌ಗೆ ಬರಬೇಡಿ ಎಂಬುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲೇ ವಿಚಾರಣೆಯಲ್ಲಿ ಮನುವಾದಿತ ವಕೀಲನೊಬ್ಬ ಶೂ ಎಸೆದಿದ್ದಾರೆ. ಸನಾತನ ಧರ್ಮಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಭಾರತದ ಇತಿಹಾಸದಲ್ಲೇ ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನು ಅವಮಾನಿಸಲಾಗಿದೆ. ಈ ಅವಮಾನ ಮತ್ತು ಸಂವಿಧಾನಕ್ಕೆ ಅಪಚಾರ. ಇಂತಹ ಹೀನ ಕೃತ್ಯ ಎಸಗಿದ ಸನಾತನ ದೇಶ ದ್ರೋಹಿಗೆ ಕಾನೂನಿನ ಮೂಲಕ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಂಘಟನಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net