21 ಜನರ ವಿರುದ್ದ ದೂರು

Published on

ಬಳ್ಳಾರಿ : ಇಲ್ಲಿನ ಬಾಪುಜಿನಗರದಲ್ಲಿ ಮಕ್ಕಳ ವಿಚಾರದಲ್ಲಿ ಕಾಮಾಕ್ಷಿ ಹಾಗೂ ಮಹೇಶ ಕುಟುಂಬದವರ ನಡುವಿನ ಜಗಳದಲ್ಲಿ ಎರಡು ಕಡೆಯಿಂದ ದೂರು - ಪ್ರತಿದೂರುಗಳಲ್ಲಿ 21 ಜನರ ವಿರುದ್ದ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ದೂರು ದಾಖಲಾದ ಬಳಿಕ ತಡರಾತ್ರಿ ಮಹೇಶ್‌ನ ಸಂಬಂಧಿತರು ಕಾಮಾಕ್ಷಿ ಕುಟುಂಬದವರ ಹಲ್ಲೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ನಂದೀಶ್, ತಾಯಣ್ಣ, ಮಹೇಶ, ಪ್ರಕಾಶಸ್ವಾಮಿ ಹಾಗೂ ಸೂರಿ ಸೇರಿ ಒಟ್ಟೂ ಐವರನ್ನು ದಸ್ತಗಿರಿ ಮಾಡಲಾಗಿದೆ. ಈ ಹಲ್ಲೆ ಸಂಬಂಧಪಟ್ಟಂತೆ ಸದ್ಯ ತನಿಖೆ ನಡೆಯುತ್ತಿದ್ದು ವಿಚಾರಣೆ ಪೂರ್ಣಗೊಂಡ ಬಳಿಕ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net