ಸಮುದಾಯಕ್ಕೆ 2ಎ ಮೀಸಲು ನೀಡಲಿ: ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಪ್ರ.ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಒತ್ತಾಯ

04012021 Bellary Tippeswami
Published on

ಬಳ್ಳಾರಿ: ಸಮುದಾಯಕ್ಕೆ ಸರ್ಕಾರ 2ಎ ಮೀಸಲು ನೀಡಬೇಕು ಎಂದು ಜಿಲ್ಲಾ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆ. 1994ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಸಚಿವರಾಗಿದ್ದ ಕೆ.ಎಚ್.ವಿಶ್ವನಾಥ್, ಸಮುದಾಯದ ಅಭಿಪ್ರಾಯ ಪಡೆಯದೆ 2ಎ ಮೀಸಲಿನಿಂದ ಏಕಾಏಕಿ 3ಎ ಮೀಸಲಿಗೆ ಸೇರ್ಪಡೆ ಮಾಡಲಾಗಿದೆ. ಅಂದಿನಿಂದ ಸುಮಾರು 26 ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ.

ಕಳೆದ ವರ್ಷ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2ಎ ಮೀಸಲು ಭರವಸೆ ನೀಡಿದ್ದಾರೆ. ಆದರೆ, ನಾಲ್ಕು ತಿಂಗಳಿಂದ ಚಕಾರ ಎತ್ತುತ್ತಿಲ್ಲ. ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 2ಎ ಮೀಸಲಿಗಾಗಿ ಜ.6ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ.ರಮೇಶ್ ಬುಜ್ಜಿ, ಮುಖಂಡರಾದ ಎಸ್.ನಾಗರಾಜ್, ಡಿ ವಿನೋದ್‌ಕುಮಾರ್, ಎಂ ಈಶ್ವರ್‌ರೆಡ್ಡಿ, ನಾರಾಯಣಪ್ಪ, ಎಸ್ ಕೃಷ್ಣ, ಜಿ.ಶಂಕರ್, ರಂಗನಾಥ್, ಜಿ.ಶ್ರೀನಿವಾಸಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net