

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಶ್ರೀ ಗಾಲಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತ ನಿರ್ವಹಣಾ ಕಾಲೇಜಿ(ಸಿಟಿ)ಗೆ ಡಿ.8 ಮತ್ತು 9 ರಂದು ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್(ನ್ಯಾಕ್) ತಂಡ ಆಗಮಿಸಲಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಜುಬೀನಾ ಸುಲ್ತಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಪಂಜಾಬಿನ ಶಾಂತ್ ಬಾಬಾ ಬಾಘ್‌ಸಿಂಗ್ ವಿವಿಯ ಕುಲಪತಿ ಧರ್ಮಜಿತ್ ಸಿಂಗ್ ಫರ್ಮಾಲಾ, ಹೈದರಾಬಾದಿನ ಉಸ್ಮಾನಿಯಾ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ವಿಠಲ್ ಮೂಗ, ತಮಿಳುನಾಡಿನ ಕಾರ್ವೆ ಕಾಲೇಜಿನ ಪ್ರಾಚಾರ್ಯೆ ಡಾ.ವಿ.ಸುಜಾತಾ ನೇತೃತ್ವದಲ್ಲಿ ನ್ಯಾಕ್ ಕಮಿಟಿ ಕಾಲೇಜಿಗೆ ಆಗಮಿಸಲಿದೆ. ಕಾಲೇಜಿನಲ್ಲಿ ಒಟ್ಟು 2320 ವಿದ್ಯಾರ್ಥಿಗಳಿದ್ದು, 51 ಬೋಧಕ ಸಿಬ್ಬಂದಿ ಇದ್ದಾರೆ.