ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ನಡೆದೇ ಹೊರಟಿದ್ದಾರೆ 75 ವರ್ಷದ ವೃದ್ಧ

090620 Ballari Old Citizen Go By Walk
Published on

ಬಳ್ಳಾರಿ: ಮಕ್ಕಳು ಮತ್ತು ವೃದ್ಧರಿಗೆ ಬಸ್‌ಗಳಲ್ಲಿ ಪಯಣ ನಿರ್ಬಂಧದ ಪರಿಣಾಮ ಬಳ್ಳಾರಿಯಿಂದ ಚಿತ್ರದುರ್ಗದವರೆಗೆ 75 ವರ್ಷದ ಹಿರಿಯರೊಬ್ಬರು ಗಂಟುಮೂಟೆಯೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಒಂದು ವಾರದ ಹಿಂದೆ ನಗರದಿಂದ ಹೊರಟ ವೃದ್ಧ, ಸಂಡೂರು ಮೂಲಕ ದುರ್ಗಕ್ಕೆ ತೆರಳುತ್ತಿದ್ದು ಒಟ್ಟು 133 ಕಿಮೀ ಕ್ರಮಿಸಬೇಕಿದೆ. ಚಿತ್ರದುರ್ಗ ಮೂಲದ ಈ ವೃದ್ಧ ಲಾಕ್‌ಡೌನ್‌ಗೂ ಮುನ್ನ ನಗರಕ್ಕೆ ಬಂದಿದ್ದ. ಈಗ ಬಸ್‌ಸಂಚಾರ ಆರಂಭವಾದರೂ ವೃದ್ಧರಿಗೆ ಅದರಲ್ಲಿ ಅವಕಾಶವಿಲ್ಲದ ಕಾರಣ ನಡೆದೇ ಪಯಣ ಬೆಳೆಸಿದ್ದಾರೆ. ಇವರ ಹೆಸರು ತಿಳಿದುಬಂದಿಲ್ಲ. ನಡೆದುಕೊಂಡು ಹೋಗುತ್ತಿದ್ದ ಇವರನ್ನು ನೋಡಿದವರು ಮಾತನಾಡಿಸಿ, ವಿಡಿಯೋ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net