ಚಿಲ್ಲಿ ಮಾರುಕಟ್ಟೆ ತ್ವರಿತಗತಿಯಲ್ಲಿ ಆರಂಭಿಸಿ

Published on

ಬಳ್ಳಾರಿ ; ನಗರದಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣಕ್ಕಾಗಿ 21 ಎಕರೆ ಸ್ಥಳ ಗುರುತಿಸಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಗರದ ಬೆಳಗಲ್ ಕ್ರಾಸ್ ಬಳಿಯ 21 ಎಕರೆ ಭೂಮಿಯನ್ನು ಈ ಮುಂಚೆ ಸರ್ಕಾರವು ಅನುಮೋದಿಸಿತ್ತು. ಆದರೆ, ಇದರ ಕೆಲಸ ಇವತ್ತಿಗೂ ಕಾರ್ಯ ರೂಪಕ್ಕೆ ಬಂದಿಲ್ಲ. ದಯವಿಟ್ಟು ಇದನ್ನು ಅದಷ್ಟು ಬೇಗ ಕಾರ್ಯಗತಗೊಳಿಸಬೇಕು. ಈ ಕೆಲಸಕ್ಕಾಗಿ ಖಾಸಗಿ ದಲ್ಲಾಳಿಗಳನ್ನು ಹೊರತುಪಡಿಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೆ ರೈತರಿಗೆ ಅನುಕೂಲವಾಗಲಿದೆ. ನೆರೆಯ ಆಂಧ್ರಪದೇಶದಲ್ಲಿ ಗುಂಟೂರು ತಳಿಯ ಮೆಣಸಿನಕಾಯಿ ಬೆಳೆಯಿದ್ದು, ರಾಜ್ಯದಲ್ಲಿ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯುತ್ತಿದ್ದು ಬೆಂಬಲ ಬೆಲೆಯನ್ನು ಕೊಟ್ಟು ಸಹಕರಿಸಬೇಕು. ಕೆಲ ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಇಳಿಕೆಯಿಂದಾಗಿ ಮೂವರು ರೈತರು ಹಾಗೂ ಮೂವರು ಪರಿಕರ ಮಾರಾಟಗಾರರು ಅತ್ಮಹತ್ಯೆ ಶರಣಾಗಿದ್ದಾರೆ. ಮುಂದೆ ಹೀಗಾ ಆಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net