ಬಳ್ಳಾರಿ ; ತಾಲೂಕಿನ, ಹೊಸ ಯರ‌್ರಗುಡಿ ಗ್ರಾಮದಲ್ಲಿ ಈಚೆಗೆ ನಡೆದ ಬಾಲ್ಯವಿವಾಹಕ್ಕೆ ಸಂಬಂಧಿಸಿ ಮಕ್ಕಳ ಸಹಾಯವಾಣಿ 1098ಗೆ ಬಂದ ದೂರಿನ ಅನ್ವಯ ವಲಯ ಮೇಲ್ವಿಚಾರಕಿ ಮತ್ತು ಬಾಲ್ಯ ವಿವಾಹ ನಿಷೇಧ ಅಧಿಕಾರಿ ಸುಶೀಲ ಯಲಿಗಾರ್ ಪ್ರಕರಣ ಭೇದಿಸಿ ವರನ ಮನೆಯಲ್ಲಿದ್ದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶ್ವಸಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವರ, ವರನ ತಂದೆ, ತಾಯಿ ಹಾಗೂ ಬಾಲಕಿಯ ತಂದೆ - ತಾಯಿ ವಿರುದ್ಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==