ಸರಗಳ್ಳತನ ಆರೋಪಿಗಳ ಬಂಧನ

Published on

ಬಳ್ಳಾರಿ : ಈಚೆಗೆ ತಾಲೂಕಿನ ಬನ್ನಿಹಟ್ಟಿಯಲ್ಲಿ ಕಿರಾಣಿ ಅಂಗಡಿಯ‌ ಮಾಲೀಕಳಿಗೆ ಬೆದರಿಕೆಯೊಡ್ಡಿ ಕೊರಳಲ್ಲಿದ್ದ ಚಿನ್ನಾಭರಣ ಸರ ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ.

ಬಳ್ಳಾರಿ ತಾಲೂಕಿನ ಗುಡಾರನಗರ ನಿವಾಸಿಗಳಾದ ನರೇಂದ್ರ, ವೈ. ಶೇಖರ್ ಬಂಧಿಸಿ, ಬಂಗಾರದ ಸರವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net