ಬಳ್ಳಾರಿ, ಪ್ರತಿಯೊಬ್ಬರು ಸಿರಿಧಾನ್ಯ ಸೇವನೆಯಿಂದ ಆರೋಗ್ಯಕ್ಕೆ ಶ್ರೀರಕ್ಷೆಯಾಗಿ ಕಾಪಾಡಲಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಇಲ್ಲದೇ ಬೆಳೆಯುವ ಬೆಳೆ ಅಂದರೆ ಅವು ಸಿರಿಧಾನ್ಯಗಳು. ಹೀಗಾಗಿ ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯಗಳನ್ನು ಉಪಯೋಗಿಸಿಬೇಕು. ಮಹಿಳೆಯರು ಇದನ್ನು ಅರಿತುಕೊಂಡರೆ ಇಡೀ ಕುಟುಂಬದವರ ಆರೋಗ್ಯ ಸುಾರಣೆ ಆಗಲಿದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ ಮಾತನಾಡಿ, ಸಿರಿಧಾನ್ಯಗಳಲ್ಲಿ ನಾರು, ಕಬ್ಬಿಣದ ಅಂಶಗಳು ಹಾಗೂ ಕಾರ್ಬೋಹೈಡೇಟ್‌ಗಳು ಹೆಚ್ಚಾಗಿವೆ. ಜತೆಗೆ ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋಧಕ ಶಕ್ತಿ ಇರುವುದರಿಂದ ಪೌಷ್ಠಿಕತೆಯ ಖಣಜಗಳೇ ಆಗಿವೆ. ಅಕ್ಕಿ, ಗೋಧಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್, ನಾರಿನಾಂಶ ಹಾಗೂ ಖನಿಜಗಳನ್ನು ಹೊಂದಿವೆ. ರಾಸಾಯನಿಕಯುಕ್ತ ಆಹಾರ ಸೇವಿಸಿ ಈಗ ಮನುಷ್ಯ ರೋಗಗಳ ಗೂಡಾಗಿದ್ದಾನೆ. ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ ಬಿಪಿ, ಶುಗರ್ ಬರಲ್ಲ ಎಂದು ತಿಳಿಸಿದರು.
ಸಿರ‌್ಯಿಾನಗಳ ನಡಿಗೆ: ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ನಡಿಗೆ ಡಿಸಿ ಕಚೇರಿಯಿಂದ ಆರಂಭವಾಗಿ ತೇರು ಬೀದಿ, ಮೋತಿ ವೃತ್ತ ಮುಖಾಂತರ ಮರಳಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯಗೊಂಡಿತು.
ಸಿರಿಾನ್ಯಗಳ ನಡಿಯಲ್ಲಿ ಸಿರಿಧಾನ್ಯ ತಾಕತ್ತು ಸಕಲ ಪೌಷ್ಠಿಕಾಂಶಗಳ ಸಂಪತ್ತು, ಸಿರಿಧಾನ್ಯ ಸೇವಿಸಿ ಅನಾರೋಗ್ಯ ದೂರವಿರಿಸಿ, ನವಣೆ ನಮ್ಮ ಆರೋಗ್ಯದ ನಿರ್ವಹಣೆ, ಜೋಳ ಇಲ್ಲದ ಊಟ ಬರೀ ಗೋಳಾಟ, ಸಿರಿಧಾನ್ಯ ಬಳಸು ಬಳ್ಳೆಯ ಜೀವನ ನಡೆಸು, ರಾಗಿ ಬಳಸಿ ಆರೋಗ್ಯ ಉಳಿಸಿ, ಬರಗು ಇದ್ದರೆ ಬರಗಾಲದಲ್ಲೂ ಬದುಕು ಎನ್ನುವ ಫಲಕಗಳನ್ನು ಪ್ರರ್ದಶಿಸಲಾಯಿತು.