ಸ್ವಚ್ಚತೆಯೊಂದಿಗೆ ದೀಪಾವಳಿ ಹಬ್ಬ ಆಚರಿಸಿ

Published on

ಬಳ್ಳಾರಿ : ಈ ಬಾರಿಯ ದೀಪಾವಳಿ ಹಬ್ಬವನ್ನು ಪ್ರತಿಯೊಬ್ಬರೂ ಸ್ವಚ್ಛತೆಯೊಂದಿಗೆ ಆಚರಿಸಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಹೇಳಿದರು.

ಇಲ್ಲಿನ ರಾಷ್ಟ್ರೀಯ ಅಂಕಿ ಸಂಖ್ಯೆಗಳ ಇಲಾಖೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಸಂಸ್ಥೆಯಾದ ನೆಹರು ಯುವ ಕೇಂದ್ರ, ರಾಷ್ಟ್ರೀಯ ಅಂಕಿ ಸಂಖ್ಯೆಗಳ ಇಲಾಖೆ ಸಹಯೋಗದೊಂದಿಗೆ ನನ್ನ ಭಾರತದೊಂದಿಗೆ ದೀಪಾವಳಿ ಕಾರ್ಯಕ್ರಮ ಅಂಗವಾಗಿ ಮಂಗಳವಾರ ನಡೆದ ಸ್ವಚ್ಛತಾ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಸ್ಥ ಹಾಗೂ ಸುಂದರ ಸಮಾಜ ನಿರ್ಮಾಣದಲ್ಲಿ ಸ್ವಚ್ಛತೆಯ ಪಾತ್ರ ಬಹಳ ಮುಖ್ಯವಾಗಿದೆ. ಹಾಗಾಗಿ ವ್ಯಾಪಾರಸ್ಥರು ಅಂಗಡಿ ಹಾಗೂ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದರು.

ನೆಹರೂ ಯುವ ಕೇಂದ್ರದಿಂದ ಅ.30 ರ ವರೆಗೆ ನನ್ನ ಭಾರತದೊಂದಿಗೆ ದೀಪಾವಳಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾರುಕಟ್ಟೆ, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಂಚಾರ ಜಾಗೃತಿ ಮೊದಲಾದವು ಅಭಿಯಾನದ ಭಾಗವಾಗಿವೆ. ಪ್ರತಿಯೊಬ್ಬರೂ ಮನೆ, ಸುತ್ತಮುತ್ತಲಿನ ಆವರಣ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಸೇವೆಯ ಜಾಗೃತಿ ಜಾಥಾ ನಡೆಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net