ದರ್ಶನ್ ವಿಚಾರಿಸಿದ ಸಿಸಿಬಿ ಪೊಲೀಸರು

Published on

ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ಪೊಲೀಸರ ತಂಡ ಭೇಟಿ ನೀಡಿ ಕೊಲೆ ಆರೋಪಿ ದರ್ಶನ್‌ನನ್ನು ವಿಚಾರಣೆಗೆ ಒಳಪಡಿಸಿದರು.

ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿ ದರ್ಶನ್‌ಗೆ ರಾಜ್ಯಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ಪ ನೇತೃತ್ವದಲ್ಲಿ ವಿಚಾರಣೆ ನಡೆಸಿ ಕೆಲ ಮಾಹಿತಿಗಳನ್ನು ಕಲೆ ಹಾಕಿತು. ಪರಪ್ಪನ ಆಗ್ರಹಾರದಲ್ಲಿ ಮೊಬೈಲ್ ಹೇಗೆ ಸಿಕ್ಕಿತ್ತು, ಯಾವ ಕಾರಣಕ್ಕೆ ಮೊಬೈಲ್ ಬಳಕೆ ಮಾಡಿದಿರಿ ಹಾಗೂ ನಿಮಗೆ ಸಿಗರೇಟ್ ಎಲ್ಲಿಂದ ಬಂತು ಎಂಬ ಸೇರಿದಂತೆ ಸಾಲು ಸಾಲು ಪ್ರಶ್ನೆಗಳನ್ನು ಸಿಸಿಬಿ ತಂಡ ದರ್ಶನ್‌ಗೆ ಪ್ರಶ್ನಿಸಿದೆ. ಸಿಸಿಬಿಯ ಹಲವು ಪ್ರಶ್ನೆಗಳಿಗೆ ದರ್ಶನ್ ಉತ್ತರಿಸಲು ತಡಪಡಿಸಿದರು ಎಂದು ಮೂಲಗಳು ತಿಳಿಸಿದವು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ನೀಡಲು ಜೈಲು ಅಧಿಕಾರಿಗಳ ಬಳಿ ಅನುಮತಿ ಪಡೆದಿದ್ದರು. ಆದರೆ, ಕೆಲ ಕಾರಣತರಂಗಳಿಂದ ಸೋಮವಾರ ಭೇಟಿ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net