ಕಾರು ಡಿವೈಡರ್‌ಗೆ ಡಿಕ್ಕಿ, ಓರ್ವ ಮೃತ

Published on

ಬಳ್ಳಾರಿ : ಸಂಡೂರು ತಾಲೂಕಿನ ತೋರಣಗಲ್ ಬೈಪಾಸ್ ರಸ್ತೆಯಲ್ಲಿ ಕಾರುವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಪ್ರಯಾಣಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ತೋರಣಗಲ್ ರೈಲು ನಿಲ್ದಾಣದ ಪ್ರದೇಶದ ನಿವಾಸಿ ತಿಪ್ಪೇಸ್ವಾಮಿ (27) ಮೃತ. ಕಾರಿನ ಚಾಲಕ ಅಜಾಗುರುಕತೆ, ಅತಿವೇಗವಾಗಿ ಚಾಲನೆ ಮಾಡಿದ್ದರಿಂದ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಸೇರಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net