ಬಳ್ಳಾರಿ : ಇಲ್ಲಿನ ಕೆಆರ್‌ಸ್ ಫಂಕ್ಷನ್ ಹಾಲ್ನಲ್ಲಿ ಶ್ರೀರಾಮ ರಾಜು ಫೌಂಡೇಷನ್ ಹಾಗೂ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಸಹಯೋಗದೊಂದಿಗೆ ಮೂರನೇ ವರ್ಷದ ರಕ್ತದಾನ ಶಿಬಿರ ( ಜು 20 ರಂದು ) ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಶ್ರೀರಾಮರಾಜು ಹೇಳಿದರು.
ನಗರದ ಶ್ರೀರಾಮ ಪತ್ತಿನ ಸಹಕಾರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಕ್ತದಾನ ಮಾಡುವ ಪ್ರತಿಯೊಬ್ಬರಿಗೆ ಪ್ರಮಾಣ ಪತ್ರ ಹಾಗೂ ಹೆಲ್ಮೆಟ್ ವಿತರಿಸಲಾಗುವುದು. ರಕ್ತದಾನ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬ ಸಂದೇಶದ ಮೂಲಕ ಶಿಬಿರ ಆಯೋಜಿಸಲು ಉದ್ದೇಶವಾಗಿದೆ. ಕಳೆದ ಕೆಲ ವರ್ಷಗಳಿಂದ ಫೌಂಡೇಷನ್ ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕ ವಿತರಣೆಯಿಂದ ಹಿಡಿದು, ಶಾಲಾ ಗ್ರಂಥಾಲಯಗಳಿಗೆ ಮಕ್ಕಳ ಪುಸ್ತಕ, ಕರೊನಾ ಸಮಯದಲ್ಲಿ ರೇಷನ್ ಕಿಟ್ ವಿತರಣೆ , ಸಸಿ ನೆಡುವಂತಹ ಹಲವಾರು ಸಮಾಜಮುಖಿ ಸೇವೆಗಳಲ್ಲಿ ನಿರಂತರವಾಗಿ ತೊಡಗಿಸಕೊಳ್ಳಲಾಗಿದೆ ಎಂದರು.