17ರಂದು ಬೃಹತ್ ರಕ್ತದಾನ ಶಿಬಿರ

Praveen Kankariya
Published on

ಬಳ್ಳಾರಿ: ಅಖಿಲ ಭಾರತೀಯ ತೆರಪಂಥ ಯುವಕ ಪರಿಷತ್ ತನ್ನ 58ನೇ ಸಂಸ್ಥಾಪನಾ ದಿನದ ಅಂಗವಾಗಿ ಮೆಗಾ ಬ್ಲಡ್ ಡೊನೇಷನ್ ಡ್ರೈವ್ ಅನ್ನು ಸೆ.17ರಂದು ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರವೀಣ್ ಕಂಕರಿಯ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ರಕ್ತದಾನ ಶಿಬಿರ ನೆಡೆಯಲಿದೆ. ವರ್ಧಮಾನ್ ಜೈನ ಸ್ಥಾನಿಕವಾಸಿ ಶ್ರವಕ್ ಸಂಘ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರಾಮ್ ರಹಿಮ್ ಗ್ರೂಪ್, ಮೇಧಾ ಕಾಲೇಜ್, ರಾಜಸ್ಥಾನ್ ಸಮಾಜ, ಬಾಬಾ ರಾಮದೇವ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ನಗರದ ಕೊಟ್ಟೂರು ಸ್ವಾಮಿ ಮಠ, ಬಾಲಾಂಜಿನೇಯ ದೇವಸ್ಥಾನ, ಮೇಧಾ ಕಾಲೇಜು, ಕಪ್ಪಗಲ್ಲು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣ, ಅಗಡಿ ಮಾರೆಪ್ಪ ಕಾಂಪೌಂಡನ ಶಿವಾನಂದ ಆಶ್ರಮ, ಕೌಲ್‌ಬಜಾರ್‌ನ ಮಹಮ್ಮದೀಯ ಕಾಲೇಜ್ ಮತ್ತು ಸಿರಗುಪ್ಪದ ಬಳ್ಳಾರಿ ರಸ್ತೆಯ ನಿಟ್ಟೂರು ನರಸಿಂಹ ಮೂರ್ತಿ ಪ್ಲಾಟ್‌ನಲ್ಲಿ ರಕ್ತದಾನ ಶಿಬಿರ ನಡೆಯಲಿವೆ ಎಂದರು. ಸದಸ್ಯರಾದ ಪಂಕಜ್ ಛಜಡ್, ಪಂಕಜ್ ಬನ್ಸಾಲಿ, ಪ್ರವೀಣ್ ಗೋಟಿ, ವೆಂಕಟರೆಡ್ಡಿ, ಅನಿತಾ, ಲಕ್ಷ್ಮೀಪ್ರಿಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net