ಬಿಜೆಪಿ ಅಚ್ಚರಿ ಅಭ್ಯರ್ಥಿ ಆಯ್ಕೆ

Published on

ಬಳ್ಳಾರಿ : ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಈ ಬಾರಿ ಬಿಜೆಪಿಯಿಂದ ಅಚ್ಚರಿಯ‌ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಮತ್ತೂಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಮೂಲತಃ ವಿಜಯನಗರ ಜಿಲ್ಲೆಯ ಮರಿಯಮ್ಮನ ಹಳ್ಳಿ ನಿವಾಸಿಯಾದ ಬಂಗಾರು ಸೋಮಣ್ಣ ಹಾಗೂ ಬಂಗಾರು ಹುಲಿಗೆಮ್ಮ‌ ದಂಪತಿಯ ಪುತ್ರನೆ ಬಂಗಾರು ಹನುಮಂತು ಅವರ ಹೆಸರನ್ನು ಘೋಷಿಸಲಾಗಿದೆ. 1998 ರಲ್ಲಿ ಎಬಿವಿಪಿ ಸಕ್ರಿಯ ಕಾರ್ಯಕರ್ತರಾಗಿ ಸೇರ್ಪಡೆ ಯಾಗಿದ್ದಾರೆ. 2003- 04 ರಲ್ಲಿ ಮರಿಯಮ್ಮನಹಳ್ಳಿಯಲ್ಲಿ ಬಿಜೆಪಿಯಿಂದ ಜಿಪಂ‌ ಗೆ ಸ್ಪರ್ಧಿಸಿ ಸೋತಿದ್ದರು. 2018ರಲ್ಲಿ ಸಂಡೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2023 ರಲ್ಲಿ ಕೂಡ್ಲಿಗಿ ಸ್ಪರ್ಧಿಸಲು ಪ್ರಯತ್ನಿಸಿ ವಿಫಲರಾದರು.

ಬಂಡಾಯದ ಅಭ್ಯರ್ಥಿಗೆ ಟಿಕೆಟ್ : 2018ರಲ್ಲಿ ಕೆ.‌ ಘೋರ್ಪಡೆ ಬೆಂಬಲಿತ ರಾಘವೇಂದ್ರ ಟಿಕೆಟ್ ನೀಡಿದ ಹಿನ್ನಲೆ ಕಾರ್ಯಕರ್ತಕರನ್ನು ಮಣೆ ಹಾಕದೆ ಕಾಂಗ್ರೆಸ್ ನಿಂದ ಬಿಜೆಪಿ ಬಂದಿದ್ದ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ನಾಯಕರ ವಿರುದ್ಧ ಅಕ್ರೋಶಗೊಂಡು 2018 ರಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಬಂಗಾರು ಹನುಮಂತು ಸ್ವತಂತ್ರವಾಗಿ ಸ್ಪರ್ಧಿಸಿ 7191 ಮತ ಪಡೆದು ಸೋತಿದ್ದರು. ಸಂಡೂರು ‌ಕ್ಷೇತ್ರ ಎಸ್ಪಿ ‌ಮೀಸಲು ಕ್ಷೇತ್ರವಾಗಿರುವದರಿಂದ ಎಸ್ಪಿ ಮತಗಳ ಗೆಲುವಿಗೆ ನಿರ್ಣಯಕವಾಗಿವೆ. ಒಂದೆಡೆ ಕಳೆದ ಹಲವು ವರ್ಷಗಳಿಂದ ಎಬಿವಿಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಜಿಲ್ಲೆಯಲ್ಲಿ ಎಸ್ಟಿ ‌ಮೋರ್ಚಾ ಅಧ್ಯಕ್ಷರಾಗಿ ಕೆಲ ವರ್ಷಗಳು ಕಾರ್ಯ ನಿರ್ವಹಿಸುವುದರಿಂದ ಯುವಕರ ಹಾಗೂ ಎಸ್ಟಿ ಮತಗಳು ಸೆಳೆಯಬಹುದು ಎಂಬುದು ಬಿಜೆಪಿ ನಾಯಕರ ಒಲವು.

ರೆಡ್ಡಿ, ಘೋರ್ಪಡೆ ಬೆಂಬಲಿತರಿಗೆ ಟಿಕೆಟ್ ಮಿಸ್ : ಸಂಡೂರು ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳಿಂದ ಚುನಾವಣೆ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಸಂಡೂರು ಕ್ಷೇತ್ರದಲ್ಲಿಯೇ ಮನೆ ಮಾಡಿ ತನ್ನ ಬೆಂಬಲಿತ ಅಭ್ಯರ್ಥಿ ಕೆ. ಎಸ್ . ದಿವಾಕರಗೆ ಟಿಕೆಟ್ ‌ಕೊಡಿಸಲು‌ ಲಾಬಿ ನಡೆಸಿದ್ದರು. ಇನ್ನೊಂದಡೆ ಕೆ. ಘೋರ್ಪಡೆ ಬೆಂಬಲಿತರಾದ ಮಾಜಿ ಸಂಸದ ದೇವೇಂದ್ರಪ್ಪ, ಪುತ್ರ ಅಣ್ಣಪ್ಪ, ಶಿಲ್ಪಾ ರಾಘವೇಂದ್ರ ಸೇರಿದಂತೆ ಇತರರಿಗೆ ಟಿಕೆಟ್ ‌ಕೊಡಿಸಲು ರಾಜ್ಯ ನಾಯಕರ ಜತೆ ಚರ್ಚಿಸಿದ್ದರು. ಆದರೆ, ಇಬ್ಬರ ‌ನಾಯಕರ ಮಾತಿಗೆ ಮನ್ನಣೆ ಹಾಕದೆ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಈ ಇಬ್ಬರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿಲಿದ್ದಾರೆರೂ ಅಥವಾ ತಟಸ್ಥವಾಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಮಾಜಿ ಸಚಿವ ಶ್ರೀರಾಮುಲು‌ ಕೂಡ ನಾನು ಸಂಡೂರು ಟಿಕೆಟ್ ಅಕಾಂಕ್ಷಿ ಅಲ್ಲ ಎಂದು ಹೇಳುತ್ತಾ ತೆರೆ ಮರೆಯಲ್ಲಿ ಟಿಕೆಟ್ ಗಾಗಿ ಲಾಬಿ‌ ನಡೆಸಿದ್ದಾರೆ ಎಂದು‌ ಮೂಲಗಳು ಖಚಿತಪಡಿಸಿದವು. ಒಟ್ಟಾರೆ ‌ಹಲವು ದಿನಗಳಿಂದ‌ ಬಿಜೆಪಿ ಯಿಂದ‌‌‌‌ ಯಾರಿಗೆ‌ ಟಿಕೆಟ್ ಸಿಗಲಿದೆ ಎಂಬುದಕ್ಕೆ‌ ಬಿಜೆಪಿ ‌ನಾಯಕರು‌ ಅಭ್ಯರ್ಥಿ ‌ಘೋಷಿಸಿ‌‌ ತೆರೆ‌ ಎಳೆದಿದ್ದಾರೆ.

ಬಿಜೆಪಿ ಗೆ ಬಂಡಾಯದ ಬಿಸಿ : ಕಳೆದ ಕೆಲ ವರ್ಷಗಳಿಂದ ಬಿಜೆಪಿಯಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸುತ್ತಿದ್ದ ಕೆ. ಎಸ್. ದಿವಾಕರ್ ಕಳೆದ ಬಾರಿ ಟಿಕೆಟ್ ತಪ್ಪಿದ್ದರಿಂದ ಬಂಡಾಯ ಎದ್ದು ಕೆಆರ್ ಪಿಪಿಯಿಂದ ಸ್ಪರ್ದಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ‌ ಕಾರಣರಾಗಿದ್ದರು. ಈ ಬಾರಿ ರೆಡ್ಡಿ ಬಿಜೆಪಿ ಗೆ ಸೇರ್ಪಡೆ ಹಾಗೂ ಜಿಲ್ಲೆಗೆ ಪ್ರವೇಶಿಸಲು ಕೋರ್ಟ್ ‌ಅನುಮತಿ‌ ನೀಡಿದ್ದರಿಂದ ಸುಲಭವಾಗಿ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು. ಈ ಬಾರಿ ‌ನೇರವಾಗಿ ರೆಡ್ಡಿ ಬಿಜೆಪಿಯಲ್ಲಿದ್ದರು ಟಿಕೆಟ್ ‌ನೀಡದೆ ಇದ್ದರಿಂದ ಮತ್ತೋಮ್ನೆ‌ ನಿರಾಸೆಯಾಗಿದೆ. ಆದ್ದರಿಂದ, ದಿವಾಕರ್, ದೇವೇಂದ್ರಪ್ಪ ಬಂಡಾಯ ಏಳುವ ಭೀತಿಯಿದೆ.

ಕಾಂಗ್ರೆಸ್ ಗೆ ಒಂದಡೆ ಪ್ಲಸ್ : ಸಂಡೂರು ಕ್ಷೇತ್ರದಲ್ಲಿ ಕಳೆದ ಹಲವು ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗಳಿಂತ ಸ್ಥಳೀಯ ಅಭ್ಯರ್ಥಿಗೆ ಮನ್ನಣೆ ಹಾಕಿರುವುದು ಸಾಬೀತಾಗಿದೆ. ಬಂಗಾರು ಹನುಮಂತು ‌ಹೊರಗಿನ ಅಭ್ಯರ್ಥಿ ಎಂಬುದು ಕಾಂಗ್ರೆಸ್ ಬಿಂಬಿಸಿದರೆ ಬಿಜೆಪಿಗೆ ಗೆಲುವು ಕಷ್ಟವಾಗಲಿದೆ. ಅಲ್ಲದೆ, ಘೋರ್ಪಡೆ ಬೆಂಬಲಿತ ವ್ಯಕ್ತಿಯಾಗದೆ ಇರುವುದರಿಂದ ಅಲ್ಲಿನ ಮತದಾತರರು ಮನ್ನಣೆ ಹಾಕುವುದು ಕಷ್ಟ, ಇದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ವರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net