ಬಳ್ಳಾರಿ, ಬಿಜೆಪಿ ಅಭ್ಯರ್ಥಿ ಬಳಿ 2.75 ಕೋಟಿ ರೂ. ಆಸ್ತಿ

Published on

ಬಳ್ಳಾರಿ : ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಬಳಿ 2.5 ಕೆ.ಜಿ ಚಿನ್ನಾಭರಣವಿದ್ದು, ಅವುಗಳ ಒಟ್ಟು ಮೌಲ್ಯ 2 ಕೋಟಿ ರೂ. ಹಾಗೂ 25 ಕೆ.ಜಿ ಬೆಳ್ಳಿಯ ವಸ್ತುಗಳ ಇದ್ದು ಒಟ್ಟಾರೆ 2.75 ಕೋಟಿ ರೂ. ಇದೆ ಎಂದು ನಾಮಪತ್ರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಹನುಮಂತು 5 ಲಕ್ಷ ರೂ. ನಗದು ಹೊಂದಿದ್ದಾರೆ. ಅಲ್ಲದೆ, ಪತ್ನಿ ರೂಪಶ್ರೀ 500 ಗ್ರಾಂ ಬಂಗಾರ ಹಾಗೂ 15 ಬೆಳ್ಳಿ ವಸ್ತುಗಳು ಇದ್ದು ಒಟ್ಟಾರೆ 62 ಲಕ್ಷ ರೂ. ಎಂದು ನಮೂದಿಸಲಾಗಿದೆ. ತಂದೆ ಬಂಗಾರು ಸೊಮಪ್ಪ ಮತ್ತು ತಾಯಿ ಬಂಗಾರು ಹುಲಿಗೆಮ್ಮ ಬಳಿ ಕ್ರಮವಾಗಿ 350 ಗ್ರಾಂ ಮತ್ತು 450 ಗ್ರಾಂ ಚಿನ್ನವಿದೆ. ಜತೆಗೆ ತಂದೆ ಬಳಿ 5 ಕೆ.ಜಿ, ತಾಯಿ ಬಳಿ 15 ಕೆ.ಜಿ ಬೆಳ್ಳಿ ವಸ್ತುಗಳಿವೆ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net