ಬಳ್ಳಾರಿಯಲ್ಲಿ ಸಚಿವ ಈಶ್ವರಪ್ಪ ಪರ ಬಿಜೆಪಿ ಒಬಿಸಿ ಮೋರ್ಚಾ ಪ್ರತಿಭಟನೆ

13042022 Bellary BJP protest
Published on

ಬಳ್ಳಾರಿ: ರಾಜ್ಯದ ಎಲ್ಲೆಡೆ ಸಚಿವ ಈಶ್ವರಪ್ಪ ವಿರುದ್ಧ ಪ್ರತಿಭಟನೆಯಾದರೆ ನಗರದಲ್ಲಿ ಬಳ್ಳಾರಿ ಬಿಜೆಪಿ ಒಬಿಸಿ ಮೋರ್ಚಾ ಸಚಿವ ಕೆ.ಎಸ್.ಈಶ್ವರಪ್ಪ ಪರ, ಬೆಂಬಲ ಸೂಚಿಸಿ ನಗರದ ರಾಯಲ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಬಿಜೆಪಿ ವೃತ್ತಿಪರ ಪ್ರಕೋಷ್ಠ ಸಂಚಾಲಕ ಕೆ.ಆರ್.ಮಧುಕುಮಾರ್ ಮಾತನಾಡಿ, ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು. ಯಾವ ತಪ್ಪು ಮಾಡಿದ್ದಾರೆ ? ವೈಯಕ್ತಿಕ ಕಾರಣಕ್ಕೆ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರ ಬಳಿ ವೈಯಕ್ತಿಕವಾಗಿ 90 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಮಾಡಿ ವಾಪಸ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಆದೇಶವಿಲ್ಲದೇ ಕೆಲಸ ಮಾಡಿದ್ದಕ್ಕೆ ಯಾರು ಹೊಣೆ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್ ಕುತಂತ್ರ ರಾಜಕೀಯಕ್ಕೆ ಯಾಕೆ ಈಶ್ವರಪ್ಪ ರಾಜೀನಾಮೆ ಕೊಡಬೇಕು. ಸದನದಲ್ಲೇ ಒಮ್ಮೆ ಈಶ್ವರಪ್ಪರಿಗೆ ನೋಡಿಕೊಳ್ಳುತ್ತೇನೆಂದು ಡಿಕೆಶಿ ದಮ್ಕಿ ಹಾಕಿದ್ದರು. ಹೀಗಾಗಿ ಈ ಘಟನೆ ಹಿಂದೆ ಡಿಕೆಶಿ ರಾಜಕೀಯ ಕುತಂತ್ರವಿದೆ ಎಂದು ಆರೋಪಿಸಿದರು. ಬಿಜೆಪಿ ಈಶ್ವರಪ್ಪ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net