ಕಾಂಗ್ರೆಸ್‌ಗೆ ಸೇರಿದ ಬಿಜೆಪಿ, ಜೆಡಿಎಸ್ ಮುಖಂಡರು

Published on

ಬಳ್ಳಾರಿ : ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಹಲವು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಚಿವ ಸಂತೋಷ ಲಾಡ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ ಧರ್ಮಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಬಳಿಕ ಸಂತೋಷ ಲಾಡ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಜನಪರ ಆಡಳಿತವನ್ನು ಮೆಚ್ಚಿ ಯುವಜನತೆಯು ಹೆಚ್ಚಿನ ಪ್ರಮಾಣದಲ್ಲಿ ಪಕ್ಷವನ್ನು ಸೇರುತ್ತಿರುವುದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಹಾಗೂ ನೂರರು ಕಾರ್ಯಕರ್ತರು ಬುಧವಾರದಂದು ಕ್ಷೇತ್ರದ ಹಳೆ ದರೋಜಿ, ಧರ್ಮಾಪುರ, ನಂದಿಹಳ್ಳಿ, ಹಳೆ ಮಾದಪುರ, ಹೊಸ ಮಾದಪುರ, ವೇಣಿ ವಿರಾಪುರ ಹಾಗೂ ಕುಡಿತಿನಿಯಲ್ಲಿ ಮತಯಾಚನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net