ಬಿಂಗೋ ಬ್ಲಾಸ್ಟ್ ಕಾರ್ಯಕ್ರಮ

Published on

ಬಳ್ಳಾರಿ : ಇಲ್ಲಿನ ಅಲ್ಲಂಭವನದಲ್ಲಿ ಇಂಟರ್ ನ್ಯಾಷನಲ್ ಇನ್ನರ್ ವೀಲ್ ಡೇ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಆಫ್ ಬಳ್ಳಾರಿ ವತಿಯಿಂದ ಬಿಂಗೋ ಬ್ಲಾಸ್ಟ್ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಐದು ನೂರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿ ಹೌಜಿ ಕ್ರೀಡೆಯಲ್ಲಿ ಸ್ಪರ್ಧಿಸಿದ್ದರು. ವಿಜೇತರಿಗೆ ಸ್ಯಾರಿಸ್, ಬಂಗಾರ ಹಾಗೂ ಬೆಳ್ಳಿಯ ನಾಣ್ಯದ ಪದಕಗಳನ್ನು ಬಹುಮಾನವಾಗಿ ನೀಡಲಾಯಿತು. ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ನೂರರು ಮಹಿಳೆಯರು ಸ್ಪರ್ಧೆಯಲ್ಲಿ ಸಂತಸದಿಂದ ಪಾಲ್ಗೂಂಡರು. ಬಹುತೇಕರು ವಿವಿಧ ರೀತಿಯ ಆಕರ್ಷಕ ಬಹುಮಾನಗಳನ್ನು ಗೆದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಸಾಮಾಜಿಕ ಕೆಲಸ ಕಾರ್ಯಗಳಿಗೆ ಸದುಪಯೋಗ ಮಾಡಲಾಗುವುದು ಎಂದು ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net