ಬೆಸ್ಟ್ ಕಾಲೇಜು ಉತ್ತಮ ಫಲಿತಾಂಶ

Published on

ಬಳ್ಳಾರಿ; ನಗರದ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆದು ಸಾಧನೆಗೈದಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಜೈ ಕಿಶನ್ ಪಾಟೀಲ್ (581), ಲಿಕಿತಾ (580), ಬಿ.ಶ್ರೇಯ (577), ಧೀರಜ್ (575), ಮಾಹಿರ (575), ಸಾಯಿ ಹರ್ಷಿತ (571), ಪವನಕುಮಾರ (570) ಹಾಗೂ ವಾಣಿಜ್ಯ ವಿಭಾಗದಲ್ಲಿ ಎಸ್.ಸಹನಾ (581), ಮಧು (560) ಅಂಕ ಪಡೆದಿದ್ದಾರೆ. ಕಾಲೇಜಿನಲ್ಲಿ 172 ಡಿಸ್ಟಿಂಕ್ಷನ್, 272 ಪ್ರಥಮ ದರ್ಜೆ ಹಾಗೂ 60 ವಿದ್ಯಾರ್ಥಿ ದ್ವಿತೀಯ ದರ್ಜೆ ಪಡೆದಿದ್ದಾರೆ. ಅಲ್ಲದೆ, ಗಣಿತಶಾಸ್ತ್ರ ಒಂಬತ್ತು, ಭೌತಶಾಸ್ತ್ರ ಮೂವರು, ಕನ್ನಡ ಐವರು, ಲೆಕ್ಕಶಾಸ್ತ್ರ ಇಬ್ಬರು ಹಾಗೂ ವ್ಯವಹಾರ ಅಧ್ಯಯನದಲ್ಲಿ ಮೂವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಬೆಸ್ಟ್ ಸಂಸ್ಥೆಯ ಅಧ್ಯಕ್ಷ ಕೋನಂಕಿ ರಾಮಪ್ಪ, ಉಪಾಧ್ಯಕ್ಷ ಕೋನಂಕಿ ತಿಲಕ್‌ಕುಮಾರ, ಕಾರ್ಯದರ್ಶಿ ಮನ್ನೆ ಶ್ರೀನಿವಾಸುಲು, ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯ ಜಿ. ಶ್ರೀನಿವಾಸರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net