ಪರಿಷ್ಕೃತ ವೇತನ ಆದೇಶ ಜಾರಿಗೊಳಿಸಿ

Bellary BCM Hostel workers insist
ಬಳ್ಳಾರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಬಾಬುಗೆ ವಸತಿ ನಿಲಯಗಳ ಕಾರ್ಮಿಕ ಸಂಘದ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು. ಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಪ್ರಮೋದ್, ಸುರೇಶ್.ಜಿ ಇತರರಿದ್ದರು.
Published on


ಬಳ್ಳಾರಿ: ಬಿಸಿಎಂ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಗೆ ಇಲಾಖೆಯ ಪರಿಷ್ಕೃತ ವೇತನದ ಸರ್ಕಾರಿ ಆದೇಶ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕ ಸಂಘದ ಸದಸ್ಯರು ಮಂಗಳವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಬಾಬುಗೆ ಮನವಿ ಸಲ್ಲಿಸಿದರು.

ಕಾರ್ಮಿಕರಿಗೆ ಹಿಂದಿನ ಏಜೆನ್ಸಿಗಳಿಂದ ಬರಬೇಕಾದ ಪಿ.ಎಫ್ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು. ಕಾರ್ಮಿಕ ಕಾಯ್ದೆ ಅನ್ವಯ ತಿಂಗಳಿಗೆ ನಾಲ್ಕು ರಜೆ ಸೌಲಭ್ಯ, ನೇಮಕಾತಿ ಆದೇಶ, ಗುರುತಿನ ಚೀಟಿ, ವೇತನ ಚೀಟಿ, ಇಎಸ್‌ಐ ಕಾರ್ಡ್ ನೀಡಬೇಕು. ರಜೆಯ ದಿನ ಕಾರ್ಯನಿರ್ವಹಿಸಿದರೆ ದುಪ್ಪಟ್ಟು ವೇತನ ನೀಡಬೇಕು. ಮೂರು ತಿಂಗಳಿಂದ ಬಾಕಿಯಿರುವ ವೇತನ ಪಾವತಿಗೆ ಕ್ರಮಕೈಗೊಬೇಕು ಎಂದು ಒತ್ತಾಯಿಸಿದರು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಪ್ರಮೋದ್, ಸುರೇಶ್.ಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net