ಬಳ್ಳಾರಿ : ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ದೇಶಭಕ್ತ ನಾಗರೀಕರ ವೇದಿಕೆಯಿಂದ ಡಿ.4 ರಂದು ಬುಧವಾರ ಬಳ್ಳಾರಿ ಬಂದ್ ಆಚರಿಸಲಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ದೌರ್ಜನ್ಯ ಎದುರಿಸುತ್ತಿದ್ದಾರೆ. ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ, ಬಳ್ಳಾರಿ ಬಂದ್ ಆಚರಣೆಗೆ ಕರೆ ನೀಡಿರುವ ದೇಶಭಕ್ತ ನಾಗರೀಕರ ವೇದಿಕೆಯು, ಬಳ್ಳಾರಿ ನಾಗರೀಕರು ಸ್ವಯಂ ಪ್ರೇರಣೆಯಿಂದ ಬೆಂಬಲಿಸಿ, ಬಂದ್ ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.
ಬೆಳಗ್ಗೆ 8 ಗಂಟೆಗೆ ಬಳ್ಳಾರಿ ಬಂದ್ ಆರಂಭವಾಗಲಿದ್ದು, ಬೆಳಗ್ಗೆ 11.30 ಗಂಟೆಗೆ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.