ಬಳ್ಳಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಗಡಿಗಿ ಚನ್ನಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

261120 Ballari band Gadagi Channappa Circle Protest
ಅಖಂಡ ಬಳ್ಳಾರಿ ಜಿಲ್ಲೆ ಇರಬೇಕೆಂದು ಆಗ್ರಹಿಸಿ ಗುರುವಾರ ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
Published on

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ಅಖಂಡ ಜಿಲ್ಲಾ ಹೋರಾಟ ಸಮಿತಿಯಿಂದ ಗುರುವಾರ ಕರೆ ನೀಡಲಾಗಿದ್ದ ಬಳ್ಳಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಬಹುತೇಕ ನಗರದ ಗಡಿಗಿ ಚನ್ನಪ್ಪ ವೃತ್ತ ಸುತ್ತಮುತ್ತಲಿನ ಪ್ರದೇಶಕ್ಕೆ ಸೀಮಿತವಾಗಿತ್ತು.

ಬೆಳಗಿನ ಜಾವದಿಂದಲೇ ಗಡಿಗಿ ಚನ್ನಪ್ಪ ವೃತ್ತದಲ್ಲಿ ಜವಾಯಿಸಿದ ಅಖಂಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಆರಂಭಿಸಲಾಯಿತು. ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ವಿರುದ್ಧ ಘೋಷಣೆ ಕೂಗಿದರು. ಗಡಿಗಿ ಚನ್ನಪ್ಪ ವೃತ್ತದಲ್ಲಿ ಧರಣಿ ಕುಳಿತು ಜಿಲ್ಲೆ ವಿಭಜನೆಗೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಗಡಿಗಿ ಚನ್ನಪ್ಪ ವೃತ್ತ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಲು ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಈ ಕುರಿತು ವಾಹಿತಿ ಇಲ್ಲದ ವಾಹನಗಳ ಚಾಲಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾಯಿತು. ಸಾರಿಗೆ ಸಂಸ್ಥೆಯ ಬಸ್‌ಗಳು ನಗರದ ಹಳೆಯ ಬಸ್ ನಿಲ್ದಾಣಕ್ಕೆ ಬರಲಿಲ್ಲ. ಕೇಂದ್ರ ಬಸ್ ನಿಲ್ದಾಣದಿಂದ ಎಚ್.ಆರ್.ಗವಿಯಪ್ಪ, ಡಾ.ಅಂಬೇಡ್ಕರ್, ವಾಲ್ಮೀಕಿ ವೃತ್ತಗಳ ಮೂಲಕ ಸಂಚರಿಸಿದವು. ಆಟೋಗಳು ಎಂದಿನಂತೆ ಸಂಚರಿಸಿದವು.

ಸಂಟನೆಗಳ ಮುಖಂಡರು ಬೈಕ್ ರ‌್ಯಾಲಿ ಮೂಲಕ ಬಂದ್ ಬೆಂಬಲಿಸುವಂತೆ ಕೋರಿದರು. ಗಡಿಗಿ ಚನ್ನಪ್ಪ ವೃತ್ತ ಸುತ್ತಲಿನ ಡಬಲ್ ರಸ್ತೆ, ಡಾ.ರಾಜಕುವಾರ ರಸ್ತೆ, ಬೆಂಗಳೂರು ರಸ್ತೆ, ತೇರು ಬೀದಿ ಸೇರಿ ಹಲವೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದರೆ, ನಗರದ ವಿವಿಧೆಡೆ ಬಂದ್ ಪರಿಣಾಮ ಬೀರಿದ್ದು ಕಂಡುಬರಲಿಲ್ಲ. ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪನ್ನರಾಜ, ತುಂಗಭದ್ರಾ ರೈತಸಂದ ಅಧ್ಯಕ್ಷ ಪುರುಷೋತ್ತಮಗೌಡ ದರೂರು, ನವ ಕರ್ನಾಟಕ ಯುವ ಶಕ್ತಿ ಸಂಟನೆ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಹೆಗಡೆ, ಪೇರಂ ವಿವೇಕ, ಕುಡತಿನಿ ಶ್ರೀನಿವಾಸ, ಜೆಡಿಎಸ್ ಮುಖಂಡರಾದ ಮೀನಹಳ್ಳಿ ತಾಯಣ್ಣ, ವಿಜಯಕುವಾರ, ವಿವಿಧ ಸಂಟನೆಗಳ ಮುಖಂಡರಾದ ಗಂಗಾವತಿ ವೀರೇಶ, ಕಪ್ಪಗಲ್ಲು ಚಂದ್ರಶೇಖರ ಆಚಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net