ಗಟ್ಟಿ ಚಿನ್ನ ಮಾರಾಟ ಯತ್ನ, ಇಬ್ಬರ ಬಂಧನ

Published on

ಇಲ್ಲಿನ ಕೌಲಬಜಾರ್ ಅಭರಣದ ಮಳಿಗೆಗಳಲ್ಲಿ ಇತ್ತೀಚೆಗೆ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ರೂಪನಗುಡಿ ರಸ್ತೆಯ ಆರೀಫ್(31), ಮಿಲ್ಲರ ಪೇಟೆಯ ತೌಸೀಫ್(21) ಬಂಧಿತರು. ಆರೋಪಿಗಳಿಂದ 6.18 ಲಕ್ಷ ರೂ.ಮೌಲ್ಯದ 101 ಗ್ರಾಂ ಗಟ್ಟಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net