ಬಳ್ಳಾರಿ : ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ವಿಶೇಷವಾದ ಮೀಸಲಾತಿ ಕಲ್ಪಿಸಿದೆ. ಹೀಗಾಗಿ ಕ್ರೀಡಾಪಟುಗಳು ಇದರ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯಿಂದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಮೀಸಲಾತಿ ವರ್ಗೀಕರಣದಿಂದ ಪ್ರಸ್ತುತದಿಂದ ಹುದ್ದೆಗಳ ನೇಮಕ ಚಾಲನೆಗೊಳ್ಳಲಿವೆ. ರಾಜ್ಯದಲ್ಲಿನ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ವಸತಿ ನಿಲಯ ವ್ಯವಸ್ಥೆ ಸೇರಿದಂತೆ ಅವರನ್ನು ಪ್ರೋತ್ಸಾಹಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಮಾತನಾಡಿ, ಕ್ರೀಡಾಪಟುಗಳು ಯಶಸ್ಸು ಹೊಂದಲು ಸೂಕ್ತ ತರಬೇತಿ ಹೊಂದುವ ಮೂಲಕ ನಿರಂತರ ಪ್ರಯತ್ನ ಹಾಗೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಏರ್ಪಡಿಸಿದ್ದ 400 ಮೀ. ಓಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಬಾಕ್ಸ್ : ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಮಧ್ಯಾಹ್ನ 12.30ವರೆಗೆ ಆರಂಭಗೊಂಡಿತು. ಅಲ್ಲದೆ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಸಂಸದರು ಯಾರು ಭಾಗವವಹಿಸಿಲಿಲ್ಲ. ಕೊನೆಗೆ ಗಣ್ಯರ ಆಹ್ವಾನಕ್ಕೆ ಕಾದು ಸುಸ್ತಾದ ಇಲಾಖೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಡ್ಕರ್ ಅಧ್ಯಕ್ಷರ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆಯಿಂದ ಮೈದಾನದ ಆವರಣದಲ್ಲಿ ಬಿಸಿಲಿಗೆ ಕಾದು ಕುಳಿತಿದ್ದ ಕ್ರೀಡಾಪಟುಗಳು ವೇದಿಕೆಯಲ್ಲಿ ಗಣ್ಯರ ಭಾಷಣದ ವೇಳೆ ಬೇಗ ಮುಗಿಸಿ ಕ್ರೀಡೆಗೆ ಚಾಲನೆ ನೀಡಿ ಎಂಬುದಾಗಿ ಅಕ್ರೋಶಗೊಂಡರು. ಬಿಸಿಲಿಗೆ ಕುಳಿತಿರುವುದನ್ನು ಮನಗೊಳ್ಳದ ಅತಿಥಿಯೊಬ್ಬರು ವೇದಿಕೆಯ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ವಿವರಿಸುವುದು ಕಂಡು ಸುಸ್ತಾದರು. ಸುಡು ಬಿಸಿಲಿನಲ್ಲಿ 400 ಮೀ. ಓಟದಲ್ಲಿ ಮಹಿಳೆಯರು ಓಡುವುದು ಕಂಡ ಪಾಲಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿ ಶಾಪಹಾಕಿದರು. ಮೈದಾನಲ್ಲಿ ಬಿಸಿಲಿನ ತಾಪಕ್ಕೆ ಬೆಂದಿದ್ದ ಕ್ರೀಡಾಪಟುಗಳು ನೆರಳಿಗಾಗಿ ಹುಡುಕುತ್ತಿದ್ದರು. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದಕ್ಕೆ ಆದರೂ ಜಿಲ್ಲಾಡಳಿತ ಅಧಿಕಾರಿಗಳು ಒಬ್ಬರು ಪರಿಶೀಲಿಸಿಲ್ಲ. ದಸರಾ ಕ್ರೀಡಾಕೂಟ ಎಂಬುದು ಅವ್ಯವಸ್ಥೆಯ ಆಗರ ಎಂದರೆ ತಪ್ಪೇನಿಲ್ಲ.