ಬಳ್ಳಾರಿ ; ಇಲ್ಲಿನ ಐತಿಹಾಸಿಕ ಏಕಶಿಲಾ ಬೆಟ್ಟದ ಕೋಟೆಗೆ ರೂಪ್ ವೇ ನಿರ್ಮಾಣ ಮಾಡುವ ಕಾರ್ಯ ಸಾಧ್ಯತೆಗೆ ಭಾರತೀಯ ಪುರಾತತ್ವ ಇಲಾಖೆ ಅಕ್ಷೇಪ ಎತ್ತಿದೆ.
ಸಿಎಂ ಸಿದ್ದರಾಮಯ್ಯ ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಪ್ರವಾಸಿ ತಾಣಗಳಾದ ಐತಿಹಾಸಿಕ ಕೋಟೆ ಹೊಂದಿರುವ ಬಳ್ಳಾರಿ ಬೆಟ್ಟ, ಮಧುಗಿರಿ ಬೆಟ್ಟ ಸೇರಿದಂತೆ ಐದು ಕಡೆ ಪ್ರವಾಸೋದ್ಯಮ ಇಲಾಖೆಯಿಂದ ರೂಪ್ ವೇ ನಿರ್ಮಿಸಲು ಯೋಜನೆ ರೂಪಿಸಿದ್ದರು. ಆದರೆ, ರೂಪ ವೇ ಮಾಡಲು ಸಮಗ್ರ ಯೋಜನಾ ವರದಿ (ಡಿಪಿಆರ್) ಮಾಡಲು ರೈಟ್ಸ್ ಸಂಸ್ಥೆಗೆ ನೀಡಿತ್ತು. ಆ ಸಂಸ್ಥೆಯ ಪ್ರತಿನಿಧಿಗಳು ಕಳೆದ ಮಾ.28ರಂದು ಭೇಟಿ ನೀಡಿ ಪರಿಶೀಲಿಸಿದ್ದರು. ರೂಪ್ ವೇ ಯು ಪ್ರಾರಂಭಿಕ ಹಾಗೂ ಅಂತ್ಯದ ಸ್ಥಳವನ್ನು ಗುರುತಿಸಲು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಈ ವೇಳೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಇಲಾಖೆಯ ಅನುಮತಿಯಿಲ್ಲದೆ ಇದರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇದು ಸಂರಕ್ಷಿತ ಪ್ರದೇಶ, ಸುತ್ತಮುತ್ತಲಿನ ನೂರು ಮೀ. ವ್ಯಾಪ್ತಿಯಲ್ಲಿ ನೂರು ಮೀ. ಹೊಸದಾಗಿ ನಿರ್ಮಾಣ ಮಾಡುವುದಿಲ್ಲ ಎಂಬುದಾಗಿ ಸೂಚಿಸಿದ್ದಾರೆ.
===