ಬಳ್ಳಾರಿ:ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದಿ ನಿಗಮ ಮತ್ತು ಇಂದಿರಾಗಾಂ ವೃತ್ತಿ ಅಭಿವೃದ್ಧಿ ಕೇಂದ್ರದಿಂದ ಪ್ರಸ್ತಕ ಸಾಲಿಗೆ ಮ್ಯಾನ್ಯುಯಲ್ ಸ್ಕಾಂವೆಂಜರ್ಸ್ ಮತ್ತು ಅವರ ಅವಲಂಬಿತ ಯುವಕ ಮತ್ತು ಯುವತಿಯರಿಗೆ ಗ್ರಾಫಿಕ್ಸ್ ಡಿಸೈನಿಂಗ್ ಮತ್ತು ವಿಡಿಯೋ ಎಡಿಟಿಂಗ್ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನ.೨೫ ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ಕಂಟೋನ್‌ಮೆಂಟ್‌ನ ಆದರ್ಶ ಕಾಲೋನಿಯ ಸೆಂಟ್ ಜೋಸೆಪ್ ಶಾಲೆ ಎದುರಿನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---