ಬಳ್ಳಾರಿ : ಸಂಡೂರು ತಾಲೂಕಿನ ಮೀನುಗಾರಿಕೆ ಇಲಾಖೆಯ ಜಲಸಂಪನ್ಮೂಲಗಳಾದ ವಡ್ಡಿನ ಕಟ್ಟೆ ಕೆರೆ, ಅಂಕಮ್ಮನಾಳ ಕೆರೆ, ಯು.ರಾಜಾಪುರ ಕೆರೆ, ರಾಘವಪುರ ಕೆರೆಗಳ ಮೀನು ಪಾಶುವಾರು ವಿಲೇವಾರಿಗಾಗಿ ಪ್ರಸ್ತಕ ಸಾಲಿನ ಅರ್ಹ ಮೀನುಗಾರರ ಸಹಕಾರ ಸಂಘ, ಮೀನುಗಾರರ ಉತ್ಪಾದಕರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೂ.13 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
--------------