ಬಳ್ಳಾರಿ : ಜಿಆರ್‌ಟಿಡಿಸಿ ಸಂಸ್ಥೆಯಲ್ಲಿ ಪ್ರಸ್ತಕ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಬಿಎಸ್‌ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಪದವಿ ಕೋರ್ಸ್‌ಗೆ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ, ವಿಜ್ಞಾನ, ಶಿಕ್ಷಣ ಮತ್ತು ಯಾವುದೇ ಡಿಪ್ಲೋಮಾ) ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ.
ಮಾಹಿತಿಗೆ ಜಿಆರ್‌ಟಿಡಿಸಿ ಕಾಲೇಜು ಪ್ರಾಂಶುಪಾಲರ ಕಚೇರಿ ಅಥವಾ ಬೋಧಕ ಸಿಬ್ಬಂದಿ ಮೊ.9741264655, 9844862576, 9844474235, 8123126127 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
====