ಅರ್ಜಿ ಆಹ್ವಾನ

Published on

ಬಳ್ಳಾರಿ : ತಾಲೂಕಿನ ಕೊಳಗಲ್ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಪರಿಶಿಷ್ಟ ವರ್ಗದ 03 (ಬಾಲಕ) ಮತ್ತು 9ನೇ ತರಗತಿಯಲ್ಲಿ ಪರಿಶಿಷ್ಟ ವರ್ಗದ 01 (ಬಾಲಕ) ಸ್ಥಾನ ಖಾಲಿಯಿದ್ದು, ಅರ್ಹತಾ ಪರೀಕ್ಷೆ ಮೂಲಕ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏ.26 ಕೊನೆಯ ದಿನವಾಗಿದ್ದು, ಅರ್ಹತಾ ಪರೀಕ್ಷೆಯು ಏ.27 ರಂದು ಬೆಳಗ್ಗೆ 09 ಗಂಟೆಗೆ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ನಡೆಸಲಾಗುತ್ತದೆ. ಮಾಹಿತಿಗೆ ಕೊಳಗಲ್ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net