ಅರ್ಜಿ ಆಹ್ವಾನ

Published on

ಬಳ್ಳಾರಿ : ಮಹಾನಗರ ಪಾಲಿಕೆ ವತಿಯಿಂದ ಅಮೃತ್ 2.0 ಅಭಿಯಾನದ ಡೇ-ನಲ್ಮ್ ಅಭಿಯಾನದಡಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಚಿತವಾದ ಅರ್ಹ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಸ್ವಸಹಾಯ ಸಂಘಗಳು ಮಹಾನಗರ ಪಾಲಿಕೆ ಬಳ್ಳಾರಿ ಭೇಟಿ ನೀಡಿ ಅರ್ಜಿ ನಮೂನೆ ಪಡೆದುಕೊಂಡು, ಭರ್ತಿ ಮಾಡಿ ಫೆ.28 ರೊಳಗಾಗಿ ಸಲ್ಲಿಸಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net