ಬಳ್ಳಾರಿ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪ್ರಸ್ತಕ ಸಾಲಿನಲ್ಲಿ ೫ ವಾರದ ನಾಟಿ ಕೋಳಿ ಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ವಿತರಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.೧೫ ಕೊನೆಯ ದಿನವಾಗಿದೆ. ಮಾಹಿತಿಗೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿ ಬಳ್ಳಾರಿ-೦೮೩೯೨-೨೭೬೩೫೮, ಕಂಪ್ಲಿ-೦೮೩೯೩೨೦೦೧೦೩, ಕುರುಗೋಡು-೦೮೩೯೪೨೩೯೫೩೦, ಸಿರುಗುಪ್ಪ-೦೮೩೯೬೨೨೦೩೩೬ ಮತ್ತು ಸಂಡೂರು-೦೮೩೯೫೨೬೦೩೩೮ ಗೆ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.