ಬಳ್ಳಾರಿ ಅಪಾರ್ಟ್‌ಮೆಂಟ್‌ನಲ್ಲಿ ಆರು ಜನರಿಗೆ ಕರೊನಾ, 300 ಜನರಿಗೆ ಸೋಂಕು ಹರಡುವ ಆತಂಕ

COVID NEW
Published on

ಬಳ್ಳಾರಿ: ನಗರದ ಎಸ್.ಎನ್.ಪೇಟೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿರುವ 300ಕ್ಕೂ ಹೆಚ್ಚು ಜನರಿಗೆ ಕರೊನಾ ಭೀತಿ ಕಾಡುತ್ತಿದೆ. ಇಲ್ಲಿನ 70 ಜನರು ಸಮಾರಂಭವೊಂದಕ್ಕೆ ಹೋಗಿ ಬಂದಿದ್ದಾರೆ. ನಂತರ ಅವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ ಆರು ಜನರಲ್ಲಿ ಸೋಂಕು ದೃಢವಾಗಿದೆ.

ಹೀಗಾಗಿ ಇಡೀ ಅಪಾರ್ಟ್‌ಮೆಂಟನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಉಳಿದವರಿಗೆ ಸ್ಥಳಕ್ಕೇ ಬಂದು ಕರೊನಾ ಟೆಸ್ಟ್ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ಅಪಾರ್ಟ್‌ಮೆಂಟ್‌ನ 300 ಜನರಲ್ಲಿ ಕರೊನಾ ಆತಂಕ ಎದುರಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ, ಇದು ಕರೊನಾ ಎರಡನೆ ಅಲೆಯ ಆತಂಕವಲ್ಲ. ಅಲ್ಲದೆ, ರೂಪಾಂತರಿ ಕರೊನಾ ವೈರಸ್ ಕೂಡ ಅಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net