ಮತ್ತೊಬ್ಬ ಬಾಣಂತಿ ಮೃತ

Published on

ಬಳ್ಳಾರಿ : ಹೆರಿಗೆಗೆದಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಸಿಸೇರಿಯನ್‌ಗೆ ಒಳಗಾದ ಮತ್ತೊಬ್ಬ ಬಾಣಂತಿ ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹೊಸಪೇಟೆ ಮೂಲದ ಮುಸ್ಕಾನ್ (22)ಮೃತ. ನ.10 ರಂದು ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ಗೆ ಒಳಗಾಗಿ ಆಸ್ವಸ್ಥಗೊಂಡಿದ್ದರು. ಬಳಿಕ, ಜಿಲ್ಲೆಯ ಬಿಮ್ಸ್ ನಲ್ಲಿ ಒಂದು ದಿನ ದಾಖಲಾಗಿ ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದವು.

ಏನಿದು ಘಟನೆ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಬಾಣಂತಿಯರಾದ ನಂದಿನಿ, ಲಲಿತಮ್ಮ ಒಂದೇ ದಿನ, ಒಂದೇ ರೀತಿಯ ಸೋಂಕಿನಿಂದ ಮೃತಪಟ್ಟಿದ್ದಾರೆ. ಎರಡು ದಿನಗಳ ಬಳಿಕ ಕುರುಗೋಡು ತಾಲೂಕಿನ ರೋಜಾ ಎಂಬ ಬಾಣಂತಿ ಕೂಡ ಮೃತಪಟ್ಟಿದ್ದರು. ಮೂವರು ಬಾಣಂತಿಯರ ಮೃತಪಟ್ಟ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ರಾಜೀವ್ ಗಾಂಧಿ ವಿವಿ ಕುಲಪತಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈಗಾಗಲೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಸರ್ಕಾರ ಈವರೆಗೂ ವರದಿಯ ಬಗ್ಗೆ ಬಹಿರಂಗಗೊಳಿಸಿಲ್ಲ.

ಕೋಟ್... ಜಿಲ್ಲಾಸ್ಪತ್ರೆಯಲ್ಲಿ ಮುಸ್ಕಾನ್ ಎಂಬ ಬಾಣಂತಿಗೆ ಸೋಂಕು ತಗುಲಿದೆ ಎಂಬ ಕಾರಣದಿಂದ ಬಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಕುಟುಂಬಸ್ಥರು ಖಾಸಗಿಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಾಣಂತಿಯರ ತನಿಖೆ ವರದಿ ಸರ್ಕಾರಕ್ಕೆ ತಲುಪಿದೆ.

- ಗಂಗಾಧರಗೌಡ, ನಿರ್ದೇಶಕ, ಬಿಮ್ಸ್, ಬಳ್ಳಾರಿ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net