ದೇವಿಗೆ ಅನ್ನಪೂರ್ಣಶ್ವೇರಿ ಆಲಂಕಾರ

Published on

ಬಳ್ಳಾರಿ : ಇಲ್ಲಿನ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ದಸರಾ ಶರನ್ನವ ರಾತ್ರಿ ವೈಭವ ಹಿನ್ನೆಲೆ ದೇವಿಗೆ ಅನ್ನಪೂರ್ಣಶ್ವೇರಿ ಆಲಂಕಾರ ಮಾಡಲಾಗಿತ್ತು. ಮೇದಾದಕ್ಷಿಣ ಮೂರ್ತಿ ಹೋಮ ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು. ಮುತ್ತೈದ ಮಹಿಳೆಯರಿಂದ ಉಡಿ ತುಂಬುವದರ ಜತೆಗೆ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ಜರುಗಿತು. ನಗರ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ಮಹಿಳೆಯರು ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಸಂಜೆ ಮಹಿಳೆಯರಿಂದ ವೇದ ಮಂತ್ರ ಪಠಣ ಹಾಗೂ ನಾನಾ ಕಲಾ ತಂಡಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net