ದುರಸ್ತಿಗೊಳ್ಳದ ಹಳ್ಳ, ಸಂಚರಕ್ಕೆ ಪರದಾಟ

Published on

ಬಳ್ಳಾರಿ) : ತಾಲೂಕಿನ ತಾಳೂರು ಗ್ರಾಮದ ಮಧ್ಯೆಭಾಗದ ಹಳ್ಳದಲ್ಲಿ ತ್ಯಾಜ್ಯ ಸಂಗ್ರಹಣೆಗೊಂಡ ಪರಿಣಾಮ ರಸ್ತೆ ಅಗೆದಿದ್ದು, ವಾಹನ ಸವಾರರಿಗೆ ಸಂಚರಕ್ಕೆ ಆಡಚಣೆ ಉಂಟಾಗಿದೆ.

ಕಳೆದ ಎರಡ್ಮೂರು ದಿನದಿಂದ ಸುರಿದ ಮಳೆಯಿಂದ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಹರಿದು ಬಂದಿದೆ. ಕೆಲ ವರ್ಷಗಳಿಂದ ಹಳ್ಳ ದುರಸ್ತಿಗೊಳಿಸದ ಪರಿಣಾಮ ಪಕ್ಕದ ಶ್ರೀಗಾದಿಲಿಂಗೇಶ್ವರ ದೇವಸ್ಥಾನ ಹಾಗೂ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮ ಗ್ರಾಮಸ್ಥರೇ ಜೆಸಿಬಿ ಮೂಲಕ ರಸ್ತೆ ಅಗೆದು ತ್ಯಾಜ್ಯ ಹೊರ ಹಾಕಿ, ನೀರು ಹರಿಸಿದ್ದಾರೆ. ಆದರೆ, ಈವರೆಗೆ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿಲ್ಲ ಎಂಬುದಾಗಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಗ್ರಾಮದ ಪ್ರಮುಖ ರಸ್ತೆಯಾಗಿರುವುದರಿಂದ ಶಾಲಾ ವಾಹನಗಳು ಹಾಗೂ ಬಸ್‌ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net