ಸಮಾನ ಸ್ವೀಕರಿಸುವ ಮನಸ್ಥಿತಿ

Published on

ಬಳ್ಳಾರಿ : ಸ್ತುತಿ ನಿಂದನೆಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ರೂಢಿಸಿಕೊಳ್ಳುವಂತೆ ಅಕ್ಕಮಹಾದೇವಿ ಕರೆ ನೀಡಿದ್ದರು ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರೊ.ಡಾ.ಎಂ.ಕೊಟ್ರೇಶ್ ಹೇಳಿದರು.

ನಗರದ ಬಸವಮಂಟಪದಲ್ಲಿ ಜಿಲ್ಲಾ ಕಸಾಪ, ಡಾ.ಎಚ್.ಎಂ.ಸಾಂಸ್ಕ್ರತಿಕ ಕಲಾ ಟ್ರಸ್ಟ್, ಇತಿಹಾಸ ಅಕಾಡೆಮಿ ಹಾಗೂ ರಾಷ್ಟ್ರ ಬಸವ ದಳದ ಸಹಯೋಗದೊಂದಿಗೆ ಭಾನುವಾರ ನಡೆದ ಟಿ.ಎಚ್.ಎಂ.ಶಿವರುದ್ರಶಾಸ್ತ್ರಿ ಮತ್ತು ವೀರಮ್ಮ ದತ್ತಿ, ಟಿ.ಎಚ್.ಎಂ. ಸದಾಶಿವಯ್ಯ ಮತ್ತು ಸರ್ವಮಂಗಳಮ್ಮ ದತ್ತಿ, ಟಿ.ಎಚ್.ಎಂ.ಶಿವಯ್ಯ ಮತ್ತು ಶಿವಗಂಗಮ್ಮ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಕ್ಕಮಹಾದೇವಿಯ ವಚನಗಳು ಆಧ್ಯಾತ್ಮಿಕ ನೆಲೆಯಲ್ಲಿ ಮಹೋನ್ನತ ಸ್ಥಾನ ಪಡೆದಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net