ಅಮೆರಿಕದ ಭಾವಧಾರೆ ಸ್ಮರಣಸಂಚಿಕೆಗೆ ಗಣಿನಗರಿಯ ಯುವತಿ ಬರೆದ ಲೇಖನ ಆಯ್ಕೆ

B Vidyashree
ಬಳ್ಳಾರಿಯ ಬಸವೇಶ್ವರ ನಗರದ ನಿವಾಸಿ ಬಿ.ವಿದ್ಯಾಶ್ರೀ.
Published on

ಬಳ್ಳಾರಿ: ಇಲ್ಲಿನ ಬಸವೇಶ್ವರ ನಗರದ ನಿವಾಸಿ ಬಿ.ವಿದ್ಯಾಶ್ರೀ ಬರೆದ ಲೇಖನ ಅಮೆರಿಕದ ಭಾವಧಾರೆ ಸ್ಮರಣಸಂಚಿಕೆ ಪುಸ್ತಕಕ್ಕೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಾವಿಕ ವಿಶ್ವಕನ್ನಡ ಸಮಾವೇಶ ನಡೆದಿತ್ತು. ಆನ್‌ಲೈನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿದ್ದರು. ನಿರ್ದೇಶಕ ಟಿ.ಎಸ್.ನಾಗಾಭರಣ ಭಾವಧಾರೆ ಸ್ಮರಣಸಂಚಿಕೆ ಪುಸ್ತಕ ಬಿಡುಗಡೆ ಮಾಡಿದ್ದರು. ಇದರಲ್ಲಿ ರಾಜ್ಯದ ನಾಲ್ಕು ಜನರ ಲೇಖನ ಆಯ್ಕೆಯಾಗಿದ್ದು, ಆ ಪೈಕಿ ವಿದ್ಯಾಶ್ರೀ ಬರೆದಿರುವ ‘ಅಪ್ಪ ಅಂದರೆ ಅನಂತಕಾಶ, ಅದ್ಭುತ !’ ಲೇಖನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net