ಬಳ್ಳಾರಿ ; ರಾಜ್ಯಾದ್ಯಾಂತ ಏ 25ರಂದು ಬಿಡುಗಡೆಯಾದ ‘ಅಮರ ಪ್ರೇಮಿ ಅರುಣ್ ’ ಸಿನಿಮಾವು ಯಶ್ವಸಿಯಾಗಿ ಪ್ರದರ್ಶನ ಜರುಗುತ್ತಿದೆ ಎಂದು ಸಿನಿಮಾದ ನಿರ್ದೇಶಕ ಜಿ. ಪ್ರವೀಣ ಕುಮಾರ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ 25ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ನಗರ, ಐತಿಹಾಸಿಕ ಏಕಶಿಲಾ ಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 54 ದಿನಗಳವರೆಗೆ ಚಿತ್ರಿಕರಣ ನಡೆದಿದೆ. ಈ ಸಿನಿಮಾದಲ್ಲಿ ಬಳ್ಳಾರಿಯ ಭಾಷೆ, ಇಲ್ಲಿನ ವಾಸ್ತವ ಚಿತ್ರಣ ಇರುವ ಮೊದಲ ಚಿತ್ರ ಹೆಗ್ಗಳಿಕೆ ಪಡೆದಿದೆ ಎಂದರು.
ಪ್ರೀತಿಸಿದ ಹುಡುಗಿ ಕಾಣೆಯಾದ ವೇಳೆ ಅವಳನ್ನು ಅಮರ ಪ್ರೇಮಿಯಾಗಿ ಹುಡುಕುವ ಬರುವ ಸಂದರ್ಭದಲ್ಲಿ ಏನೆಲ್ಲ ಜರುಗುವುದು ಎಂಬುದೇ ಸಿನಿಮಾದ ಮುಖ್ಯ ಉದ್ದೇಶವಾಗಿದೆ. ಸಿನಿಮಾದಲ್ಲಿ ಮುಖ್ಯ ಅತಿಥಿಯಾಗಿ ಕಲಾವಿದೆ ಮಂಜಮ್ಮ ಜೋಗತಿ ನಟಿಸಿದ್ದಾರೆ ಎಂದರು.
ಕನ್ನಡ ಸಿನಿಮಾಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಿಸುವ ಕನ್ನಡ ಚಿತ್ರರಂಗವನ್ನು ಬೆಳೆಸಿ ಉಳಿಸೋಣ ಎಂದು ಕರೆ ನೀಡಿದರು. ಸಿನಿಮಾ ನಟಿಯರಾದ ದೀಪಿಕ ಆರಾಧ್ಯ, ಕೃತಿ ಭಟ್, ನಟ ಹರಿಶರ್ವ ಇದ್ದರು.