ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

Published on

ಬಳ್ಳಾರಿ : ಸಂಡೂರು ವಿಧಾನಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಸಂಡೂರು ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಗಳ ಅನ್ವಯ ಚಿಹ್ನೆ ಹಂಚಿಕೆ ಮಾಡಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ಎಚ್.ಡಿ.ರಾಜೇಶ್ ತಿಳಿಸಿದ್ದಾರೆ.

ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗೆ ಕೈ ಚಿಹ್ನೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಂಗಾರ ಹನುಮಂತಗೆ ಕಮಲ ಚಿಹ್ನೆ ನೀಡಲಾಗಿದೆ.

ಅದರಂತೆ ನೋಂದಾಯಿತ ರಾಜಕೀಯ ಪಕ್ಷಗಳಾದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪಗೆ ವಜ್ರ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿಗೆ ಬ್ಯಾಟರಿ ಚಾರ್ಜ, ಟಿ.ಎರ‌್ರಿಸ್ವಾಮಿಗೆ ಟ್ರಕ್, ಎನ್.ವೆಂಕಣ್ಣಗೆ ಉಂಗುರ ಚಿಹ್ನೆ ನೀಡಲಾಗಿದೆ.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net