ಶುಶ್ರೂಷಕರಿಗೆ ಗೌರವ ತಂದುಕೊಟ್ಟ ನೈಟಿಂಗೇಲ್;ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಶಾಂತಾ ಬಣ್ಣನೆ

12052022 bellary Nightingale Birth anniversary
Published on

ಬಳ್ಳಾರಿ: ಶುಶ್ರೂಷಕರಿಗೆ ಗೌರವ-ಘನತೆ ತಂದುಕೊಟ್ಟು, ಆ ಕಾಯಕಕ್ಕೊಂದು ಭದ್ರ ಬುನಾದಿ ಹಾಕಿದವರು ಹೋರಾಟಗಾರ್ತಿ ಫ್ಲಾರೆನ್ಸ್ ನೈಟಿಂಗೇಲ್ ಎಂದು ಎಐಯುಟಿಯುಸಿಯ ಜಿಲ್ಲಾಧ್ಯಕ್ಷೆ ಶಾಂತಾ ಹೇಳಿದರು.ನಗರದ ವಿಮ್ಸ್ ಆವರಣದಲ್ಲಿ ಎಐಎಂಎಸ್‌ಎಸ್ ಹಾಗೂ ಎಐಯುಟಿಯುಸಿ ಜಂಟಿಯಾಗಿ ಗುರುವಾರ ಏರ್ಪಡಿಸಿದ್ದ ಹೋರಾಟಗಾರ್ತಿ, ನಸಿರ್ಂಗ್ ವಿಜ್ಞಾನದ ಮಹಾಮಾತೆ, ದೀಪಧಾರಿಣಿ ಎಂದೇ ಖ್ಯಾತರಾದ ಫ್ಲಾರೆನ್ಸ್ ನೈಟಿಂಗೇಲ್‌ರ ಅವರ 202ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ನೂರು ವರ್ಷಗಳ ಹಿಂದೆ ವೈದ್ಯ ವಿಜ್ಞಾನ ಇನ್ನೂ ಶೈಶವದಲ್ಲಿತ್ತು. ಆ ಕಾಲಘಟ್ಟದಲ್ಲಿ ಆಗರ್ಭ ಶ್ರೀಮಂತ ಮನೆತನಕ್ಕೆ ಸೇರಿದ್ದ ಫ್ಲಾರೆನ್ಸ್ ನೈಟಿಂಗೇಲ್ ರೋಗಿಗಳ ಸೇವೆಗೆ ಇಳಿದರು. ರೋಗಿಗಳ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಎಂದರು.
ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮೀ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ನಸಿರ್ಂಗ್ ಹುದ್ದೆಯನ್ನು ಉನ್ನತ ಹಂತಕ್ಕೆ ತಂದಿದ್ದರಿಂದ ಇಂದು ಸಾವಿರಾರು ಹೆಣ್ಣುಮಕ್ಕಳು ನಸಿರ್ಂಗ್ ಕೆಲಸಕ್ಕೆ ಸೇರುವಂತಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net