ಬಳ್ಳಾರಿ ; ಇಲ್ಲಿನ ಬಿಮ್ಸ್‌ನಲ್ಲಿ ಕ್ಯಾನ್ಸರ್ ಘಟಕದಲ್ಲಿ ಗೋಬಾರ್ಟ್ ಥೆರಪಿ ಚಿಕಿತ್ಸೆಗಾಗಿ ಹೊಸ ಯಂತ್ರ ಅಳವಡಿಕೆಗೆ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ(ಎಇಆರ್‌ಬಿ)ಗೆ ಪತ್ರ ಬರೆದಿದ್ದು ಈವರೆಗೂ ಅನುಮೋದನೆ ದೊರೆತಿಲ್ಲ.
ಸದ್ಯ, ಕ್ಯಾನ್ಸರ್ ಘಟಕದಲ್ಲಿ ಹಳೆಯ ಯಂತ್ರದಿಂದನೇ ಕಿಮೊ ಥೆರಪಿ, ಬ್ರೇಕಿ ಥೆರಫಿಯ ಚಿಕಿತ್ಸೆ ರೋಗಿಗಳಿಗೆ ನೀಡಲಾಗುತ್ತಿದೆ. ಆದರೆ, ಕಳೆದ ನಾಲ್ಕು ತಿಂಗಳಿಂದ ಬಿಮ್ಸ್‌ನಲ್ಲಿ ಗೋಬಾರ್ಟ್ ಥೆರಪಿ ಚಿಕಿತ್ಸೆ ಸೌಲಭ್ಯವಿಲ್ಲ. ಆದ್ದರಿಂದ, ವೈದ್ಯರ ಅದ್ಯ ಮೇರೆಗೆ ಹುಬ್ಬಳಿಯ ಕ್ಯಾನ್ಸರ್ ಆಸ್ಪ್ರತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಹಳೆಯ ಯಂತ್ರ ತೆರವುಗೊಳಿಸಲು ಹಾಗೂ ನೂತನ ತಂತ್ರ ಅಳವಡಿಸಲು ಎಇಆರ್‌ಬಿ ಅಗತ್ಯವಿದೆ. ಆದ್ದರಿಂದ, ಮಂಡಳಿಗೆ ಪತ್ರ ಬರೆದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅನುಮತಿ ಸಿಗುವ ಭರವಸೆಯಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಹೇಳಿದರು.