ವಾತಾವರಣದ ಕಣಗಳಿಂದ ದುಷ್ಪರಿಣಾಮ

Published on

ಬಳ್ಳಾರಿ : ಕಡಲ ತೀರದಲ್ಲಿ ಉಂಟಾಗುವ ಉಪ್ಪು ಕಣಗಳು, ಮರುಭೂಮಿಯ ಧೂಳು, ಕೈಗಾರಿಕಾ ಕಲ್ಮಶಗಳು ಹಾಗೂ ಜ್ವಾಲಾಮುಖಿ ಸ್ಪೋಟಗಳಿಂದ ಉಂಟಾಗುವ ಬೂದಿಯ ಸೂಕ್ಷ್ಮ ಘನ ಕಣಗಳಿಂದ ಮನುಷ್ಯನ ಪೀಳಿಗೆಗೆ ತೊಂದರೆಯಾಗಲಿದೆ ಎಂದು ಜಪಾನಿನ ನಾಗಸಾಕಿ ವಿಶ್ವ ವಿದ್ಯಾಲಯದ ಪ್ರೊ.ಟೋಮೋಕಿ ನಕಾಯಾಮ ಹೇಳಿದರು.

ನಗರದ ಎಸ್‌ಎಸ್‌ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ವಾತಾವರಣದ ಏರೋ ಸಾಲ್ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಲ್ಲದೆ, ವಾತಾವರಣದ ಕಣಗಳು ನಮ್ಮ ಸುತ್ತಲಿನ ಪರಿಸರದಲ್ಲಿ ಪ್ರಭಾವ ಬೀರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತವೆ ಎಂದರು.

ಅನಂತಪುರ ಎಸ್.ಕೆ. ವಿವಿಯ ನಿವೃತ್ತ ಪ್ರೊ. ರಾಮಕೃಷ್ಣ ರೆಡ್ಡಿ ಮಾತನಾಡಿ, ಗಾಳಿಯಲ್ಲಿರುವ ಸೂಕ್ಷ್ಮ ಕಣಗಳನ್ನು ಅಳೆಯುವ ಸಾಧನ ಬಳಸಿಕೊಂಡು ಪರಿಸರ ಮಾಲಿನ್ಯ ತಿಳಿಯಬಹುದು. ನಮ್ಮ ಸುತ್ತಲೂ ಗಿಡ ಮರಗಳ ಹಸಿರು ಇರುವ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net