ಪುನೀತ್ ಹೆಸರಲ್ಲಿ ಉಚಿತ ಶಾಲೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ೋಷಣೆ

08112021 BELLARY PUNIT RAJKUMAR SCHOOL
Published on

ಬಳ್ಳಾರಿ: ನಟ ಪುನೀತ್ ರಾಜಕುಮಾರ ಹೆಸರಲ್ಲಿ ಬಡಮಕ್ಕಳಿಗಾಗಿ ಉಚಿತವಾಗಿ ನಗರದಲ್ಲಿ ಶಾಲೆ ಆರಂಭಿಸಲಾಗುವುದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ೋಷಿಸಿದ್ದಾರೆ.

ಪುನೀತ್ ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರೂ ಅವರ ಮಾರ್ಗದಲ್ಲಿ ನಾನೂ ಊರಿನ ಜನರಿಗೆ ಸಹಾಯ ಮಾಡುವೆ. ಇನ್ಮುಂದೆ ರಾಜಕೀಯ ಹೊರತಾಗಿ ಜನರ ಸೇವೆ ಮಾಡುವೆ.ನನಗೆ ಸುಪ್ರಿಂ ಕೋರ್ಟ್ ಸಂಪೂರ್ಣ ಬಳ್ಳಾರಿಯಲ್ಲಿರಲು ಅವಕಾಶ ಕೊಟ್ಟಿದೆ. ಆದ್ದರಿಂದ ಬಳ್ಳಾರಿಯಲ್ಲಿದ್ದೇ ಪುನೀತ್ ಅವರಂತೆ ಸಮಾಜ ಸೇವೆ ಮಾಡುವೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಬಳ್ಳಾರಿಯ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು ಇಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಉದ್ಯಾನವೊಂದಕ್ಕೆ ಪುನೀತ್ ಹೆಸರು ಇಡಲಾಗುವುದು ಇಲ್ಲವೇ ಅವರ ಪುತ್ಥಳಿ ಸ್ಥಾಪಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net