ಆರೋಪಿ ಬಂಧನ, 74 ಗ್ರಾಂ ಬಂಗಾರ ವಶ

Published on

ಬಳ್ಳಾರಿ : ಕಳೆದ ಎರಡು ತಿಂಗಳ ಹಿಂದೆ ಮನೆಗಳ್ಳತನ ಎಸಗಿದ್ದ ಆರೋಪಿಯನ್ನು ಸೋಮವಾರ ಬಂಧಿಸಿ, ಏಳು ಲಕ್ಷ ರೂ. ಮೌಲ್ಯದ 74 ಗ್ರಾಂ ಬಂಗಾರ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ರಾಯಚೂರಿನ ಜಾದಿಲದಿನ್ನಿ ಗ್ರಾಮದ ನಾಗರಾಜ ಬಂಧಿತ. ಕಳೆದ ಮಾರ್ಚ್‌ನಲ್ಲಿ ಇಲ್ಲಿನ ರೈಲು ನಿಲ್ದಾಣ ಬಳಿಯ ಎರಡು ಮನೆಗಳಲ್ಲಿ ಬಂಗಾರ ದೋಚಿ ಪರಾರಿಯಾಗಿದ್ದ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net