ಆರೋಪಿ ಬಂಧನ, 43 ಗ್ರಾಂ ಚಿನ್ನಾಭರಣ ವಶ

Published on

ಬಳ್ಳಾರಿ : ನಗರದ ವಿವಿಧ ಕಡೆ ಮನೆಗಳ್ಳತನ ಎಸಗಿದ್ದ ಆರೋಪಿಯನ್ನು ಬಂಧಿಸಿ 1.78 ಲಕ್ಷ ರೂ. ಮೌಲ್ಯದ 43 ಗ್ರಾಂ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ತಾಳೂರು ರಸ್ತೆಯ ಅಬ್ದುಲ್(21)ಬಂಧಿತ. ಆರೋಪಿಯಿಂದ 1.26 ಲಕ್ಷ ರೂ. ಮೌಲ್ಯದ ಬಂಗಾರ, 22 ಸಾವಿರ ರೂ. ಮೌಲ್ಯದ ಬೆಳ್ಳಿ 410 ಗ್ರಾಂ ಹಾಗೂ 30 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net